ಶನಿವಾರ, 24 ಅಕ್ಟೋಬರ್ 2026

Mollywood: ಮಾಲಿವುಡ್ ಲ್ಲಿ ಮತ್ತೊಂದು ಲೈಂಗಿಕ ಆರೋಪ! ನಟ ರಿಯಾಜ್ ಖಾನ್ ನಿಂದ ಮಧ್ಯರಾತ್ರಿ ಲೈಂಗಿಕ ಡಿಮ್ಯಾಂಡ್!

Mollywood: ನಿರ್ದೇಶಕ ರಂಜಿತ್‌ ಹಾಗೂ ನಟ ಸಿದ್ದೀಕ್‌ ವಿರುದ್ಧ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಬೆನ್ನಲ್ಲೇ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದೆ.

Mollywood

Actor Riyaz Khan: ಕಾಲಿವುಡ್‌ – ಮಾಲಿವುಡ್‌ ನ ಖ್ಯಾತ ನಟ ರಿಯಾಜ್ ಖಾನ್  ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿದೆ. ಈಗಾಗಲೇ ಮಾಲಿವುಡ್‌ ನಿರ್ದೇಶಕ ರಂಜಿತ್‌ ಹಾಗೂ ನಟ ಸಿದ್ದೀಕ್‌ ವಿರುದ್ಧ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಬೆನ್ನಲ್ಲೇ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದೆ.

ಮಲಯಾಳಂ ನಟಿಯೊಬ್ಬರು ಪ್ರಾದೇಶಿಕ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ರಿಯಾಜ್‌ ಫೋನ್‌ ಸಂಭಾಷಣೆಯಲ್ಲಿ ಅಸಭ್ಯವಾಗಿ ಮಾತನಾಡಿದ ಬಗ್ಗೆ ಹೇಳಿದ್ದಾರೆ.

“ ಫೋಟೋಗ್ರಾಫರ್ ಒಬ್ಬರು ನನ್ನ ಒಪ್ಪಿಗೆಯಿಲ್ಲದೆ ನನ್ನ ಮೊಬೈಲ್ ನಂಬರನ್ನು ರಿಯಾಜ್ ಖಾನ್ ಅವರಿಗೆ ನೀಡಿದ್ದರು. ಅವರು ನನ್ನ ಸ್ಟಿಲ್ಸ್ ನೋಡಿ, ನನ್ನ ನಂಬರ್ ತೆಗೆದುಕೊಂಡು ಮಧ್ಯರಾತ್ರಿ ಫೋನ್ ಕರೆ ಮಾಡಿ ಆ ವ್ಯಕ್ತಿ ಲೈಂಗಿಕತೆ ಮತ್ತು ಅವರ ಲೈಂಗಿಕ ಆಸಕ್ತಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನಿಮಗೆ ನನ್ನೊಂದಿದೆ ಮಲಗಲು ಆಸಕ್ತಿ ಇದೆಯೇ ಎಂದು ಕೇಳಿದರು. ನನಗೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಇಷ್ಟವೆಂದು ಕೇಳಿದರು. ಆಗ ನನಗೆ 20 ವರ್ಷ. ಆದ್ರೆ ಕಾಲ್ ಮಾಡಿದ ನಂತರ ನಾನು ತುಂಬಾ ಆಘಾತಕ್ಕೊಳಗಾಗಿದ್ದೆ. ಮತ್ತು ಕಾಲ್ ಮಾಡಿರುವ ಸಮಯದಲ್ಲಿ ನನಗೆ ಸಣ್ಣ ಮಾತು ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಶಾಕಿಂಗ್ ಘಟನೆ ಬಗ್ಗೆ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ