ಶನಿವಾರ, 24 ಅಕ್ಟೋಬರ್ 2026

Janhvi Kapoor: ನನ್ನ ಪತಿ ಹೀಗಿರಬೇಕು : ಜಾನ್ವಿ ಕಪೂರ್ ಮನದಾಳದ ಮಾತು‌ : ಭಾವಿ ಪತಿಯ ಬಗ್ಗೆ ಜಾನ್ವಿ ಹೇಳಿದ್ದೇನು ಗೊತ್ತ?

Janhvi kapoor: ನನ್ನ ಕನಸನ್ನೂ ತನ್ನ ಕನಸು ಎಂದು ಭಾವಿಸುವ ಗಂಡ ಬೇಕು ಎಂದು ಜಾನ್ಹವಿ(Janhavi Kapoor) ಮನದಾಳದ ಮಾತುಗಳನ್ನಾಡಿದರು

Janhavi kapoor

Janhvi Kapoor: ಅತಿಲೋಕ ಸುಂದರಿ ಶ್ರೀದೇವಿ ಪುತ್ರಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಜಾನ್ಹವಿ ಕಪೂರ್(Janhavi Kapoor), ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್ ಎನ್‌ಟಿಆರ್(Junior NTR) ‘ದೇವರ’ ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ಗೆ(Tollywood) ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಫಸ್ಟ್‌ಲುಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಲಾಗಿ, ನಾಯಕ ರಾಮಚರಣ್(Ramcharan)ಮತ್ತು ಉಪ್ಪೇನ ನಿರ್ದೇಶಕ ಬುಚ್ಚಿಬಾಬು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಜಾನ್ಹವಿ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Rahul Gandhi: ಮೋದಿ ಚರ್ಚೆಗೆ ಬಂದ್ರೆ, ರಾಹುಲ್ ಕೇಳೋ ಮೊದಲನೆ ಪ್ರಶ್ನೆಯೇ ಇದಂತೆ !!

ಸದ್ಯ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಲು ಸಿದ್ದವಾಗಿದೆ. ಈ ಚಿತ್ರದ  ಪ್ರಚಾರದ ವೇಳೆ ಜಾನ್ಹವಿ(Janhavi Kapoor) ಅವರಿಗೆ ಭಾವಿ ಪತಿ ಹೇಗಿರುತ್ತಾರೆ ಎಂದು ಕೇಳಲಾಯಿತು. ಅದಕ್ಕೆ ಈ ಸುಂದರಿ ಹೇಳಿದ್ದೇನು ಗೊತ್ತಾ? ನನ್ನ ಕನಸನ್ನೂ ತನ್ನ ಕನಸು ಎಂದು ಭಾವಿಸುವ ಗಂಡ ಬೇಕು ಎಂದು ಜಾನ್ಹವಿ(Janhavi Kapoor) ಮನದಾಳದ ಮಾತುಗಳನ್ನಾಡಿದರು. ‘ಆತ ಯಾವಾಗಲೂ ನನ್ನೊಂದಿಗೆ ಇರಬೇಕೆಂದು ಬಯಸುತ್ತೇನೆ.

ಇದನ್ನೂ ಓದಿ: Iran Helicopter Crash : ಇರಾನ್ ಅಧ್ಯಕ್ಷ , ಸಚಿವ ಮೃತ್ಯು

ಆತ ಸದಾ ಹಸನ್ಮುಖಿಯಾಗಿರಬೇಕು. ನಾನು ಅಳುತ್ತಿದ್ದರೆ ‘ ಪಕ್ಕದಲ್ಲಿ ನಿಂತು ಧೈರ್ಯ ತುಂಬಬೇಕು’ ಎಂದು ಭಾವಿ ಪತಿ ಬಗ್ಗೆ ಜಾನ್ಹವಿ(Janhavi Kapoor)ತಿಳಿಸಿದ್ದಾರೆ. ಈ ಚೆಲುವೆ ತನ್ನ ಸ್ನೇಹಿತ ಶಿಖರ್ ಪಹಾಡಿಯಾ ಜೊತೆ ಡೇಟಿಂಗ್ ಮಾಡುತ್ತಿರುವುದು ಗೊತ್ತೇ ಇದೆ. ಇವರಿಬ್ಬರೂ ಜೋಡಿಯಾಗಿ ಹಲವು ಬಾರಿ ತಿರುಮಲ ದರ್ಶನ ಪಡೆದಿದ್ದಾರೆ. ಇದಲ್ಲದೆ, ಜಾನ್ಹವಿ(Janhavi Kapoor) ಅವರು ತಿರುಮಲದಲ್ಲಿ ಮದುವೆಯಾಗುವುದಾಗಿ ಈಗಾಗಲೇ ಬಹಿರಂಗಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ