ಸೋಮವಾರ, 26 ಅಕ್ಟೋಬರ್ 2026
Trending

‘ ಗಲ್ಲಿ ಬಾಯ್’ ಸಿನಿಮಾ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್ ( 24) ನಿಧನ

ಮುಂಬೈ : ಗಲ್ಲಿ ಬಾಯ್ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್(24) ಕಾರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

Sponsored

ಧರ್ಮೇಶ್ ಸ್ಟ್ರೀಟ್ ರ್ಯಾಪರ್ ಆಗಿ ಪ್ರಸಿದ್ಧಿ ಪಡೆದ ವ್ಯಕ್ತಿ. ಧರ್ಮೇಶ್, ಎಂಸಿ ಟೋಡ್ ಫೋಡ್ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ತನ್ನ ಗುಜರಾತಿ ರ್ಯಾಪ್‌ನಿಂದಾಗಿ ಒಳ್ಳೆಯ ಹೆಸರು ಕೂಡಾ ಪಡೆದಿದ್ದರು.

ಕೆಲವು ವರ್ಷಗಳ ಹಿಂದೆ ಹೊರಬಂದ ರಣವೀರ್ ಸಿಂಗ್ ಅವರ ಸೂಪರ್ಹಿಟ್ ಚಿತ್ರ ‘ಗಲ್ಲಿ ಬಾಯ್’ ನಲ್ಲಿ ಒಂದು ಟ್ರ್ಯಾಕ್’ಗಾಗಿ ರ್ಯಾಪ್ ಹಾಡಿದರು.