ಶನಿವಾರ, 24 ಅಕ್ಟೋಬರ್ 2026

Risha Gowda : ಬಸ್ ನಲ್ಲಿ ಕೂತಾಗ ನಿಧಾನ ಕೈ ಹಾಕೇ ಬಿಟ್ಟ, ನಾನೂ ಕೂಡ…!! ಅಚ್ಚರಿ ಘಟನೆ ನೆನೆದ ರಿಷಾ ಗೌಡ

Risha Gowda: ಬಾಸ್​ ಖ್ಯಾತಿಯ ನಟಿ ರಿಷಾ ಗೌಡ ಅವರು, ಬೆಂಗಳೂರಿನ ಬಸ್​ನಲ್ಲಿ ಪ್ರಯಾಣಿಸುವಾಗ ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಚಾನೆಲ್​ ಒಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನ ಏರ್​ಪೋರ್ಟ್​ ಬಸ್​ನಲ್ಲಿ ಹೋಗುತ್ತಿದ್ದ ಸಂದರ್ಭದ ಘಟನೆಯನ್ನು ನಟಿ ಮೆಲುಕು ಹಾಕಿದ್ದಾರೆ.

“ಕೆಲವು ವರ್ಷಗಳ ಹಿಂದೆಯಷ್ಟೇ ನಾನು ಏರ್‌ಪೋರ್ಟ್‌ಗೆ ಬಸ್‌ನಲ್ಲಿ ಹೋಗುತ್ತಿದ್ದೆ. ನಾನು ನಾರ್ಮಲ್ ಟಾಪ್ ಮತ್ತು ಜೀನ್ಸ್ ಧರಿಸಿದ್ದೆ. ಅಷ್ಟಕ್ಕೇ ಹಿಂದೆ ಕೂತಿದ್ದ ವ್ಯಕ್ತಿಯೊಬ್ಬ ನನ್ನನ್ನು ಮುಟ್ಟಿದ್ದ. ನನಗೆ ಎಷ್ಟು ಕೋಪ ಬಂತು ಅಂದ್ರೆ, ಅಲ್ಲೇ ಅವನ ಕಪಾಳಕ್ಕೆ ಬಾರಿಸಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಿಷಾ ಹೇಳಿಕೊಂಡಿದ್ದಾರೆ. ಆದರೆ ಆ ಸಮಯದಲ್ಲಿ ನನ್ನ ಸಪೋರ್ಟ್‌ಗೆ ಬಂದಿದ್ದು ಬಸ್ ಕಂಡಕ್ಟರ್ ಮಾತ್ರ. ಇನ್ನುಳಿದ ಗಂಡುಮಕ್ಕಳೆಲ್ಲ ಸುಮ್ಮನೆ ನೋಡ್ತಾ ಕೂತಿದ್ರು. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುತ್ತಿರುವುದು?” ಎಂದು ರಿಷಾ ಪ್ರಶ್ನಿಸಿದ್ದಾರೆ.

ಇಂಥ ಸಂದರ್ಭದಲ್ಲಿ ಹೆಣ್ಣುಮಕ್ಕಳು ದಿಟ್ಟತನ ಪ್ರದರ್ಶಿಸಿದರೆ ಅಲ್ಲಿದ್ದ ಪುರುಷರೂ ಸಹಾಯಕ್ಕೆ ಬರಬೇಕು. ಆದರೆ ಇಲ್ಲಿ ಹಾಗೆ ಆಗುತ್ತಿಲ್ಲ. ಕರ್ನಾಟಕ, ಭಾರತ ಎಲ್ಲಿಯೂ ಹೆಣ್ಣುಮಕ್ಕಳಿಗೆ ಸುರಕ್ಷಿತೆ ಇಲ್ಲ ಎಂದಿರುವ ನಟಿ, ತಾವು ದುಬೈನಲ್ಲಿ ಇದ್ದಾಗಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ವಿದೇಶದ ಸುರಕ್ಷತೆಯನ್ನು ನೆನೆದು ಬೇಸರ ವ್ಯಕ್ತಪಡಿಸಿದ ಅವರು, “ನನ್ನ ಅನುಭವವೇ ಹೇಳುವುದಾದರೆ ದುಬೈನಲ್ಲಿ ರಾತ್ರಿ ಮೂರು ಗಂಟೆಯಾದರೂ ಒಬ್ಬ ಹೆಣ್ಣುಮಗಳು ಧೈರ್ಯವಾಗಿ ಓಡಾಡಬಹುದು. ಆದರೆ ನಮ್ಮ ಬೆಂಗಳೂರು, ಮೈಸೂರಿನಲ್ಲಿ ಆ ವಾತಾವರಣ ಎಲ್ಲಿದೆ? ರಾತ್ರಿ ಒಂಬತ್ತು ಗಂಟೆಯಾದರೆ ಸಾಕು ಮೈಸೂರು ಸ್ತಬ್ಧವಾಗಿರುತ್ತೆ ಎಂದರು.