ಭಾನುವಾರ, 25 ಅಕ್ಟೋಬರ್ 2026
Trending

Smruthi Mandana : ಮದುವೆ ಮರಿದ ಬಳಿಕ ಮೊದಲ ಬಾರಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸ್ಮೃತಿ ಮಂದಾನ!”

Smruthi Mandana ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನಾ ತಮ್ಮ ವಿವಾಹ ಮುರಿದ ಬಗ್ಗೆ ಈಗಾಗಲೇ ಹಲವು ಸಮಯದ ಹಿಂದೆಯೇ ಮಾತನಾಡಿದ್ದರು. ಆದರೆ ಇದೀಗ ಮೊದಲ ಬಾರಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.  

Sponsored

ಸಧ್ಯ ಸ್ಮೃತಿ ಮಂದನಾ (Smriti Mandhana) ಈಗ ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅವರು 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪಂದ್ಯದ ನಂತರ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೃದಯಸ್ಪರ್ಶಿ ಸಂದೇಶ ಬರೆದಿದ್ದಾರೆ. “ಕ್ರೀಡೆಗಳು ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ನೀವು ದಣಿದಿದ್ದರೂ, ಆತಂಕದಲ್ಲಿದ್ದರೂ ಅಥವಾ ಆತ್ಮವಿಶ್ವಾಸದಿಂದಿದ್ದರೂ ಮೈದಾನದಲ್ಲಿ ಆಟ ಹೇಗೆ ಆಡುತ್ತೀರಿ ಎಂಬುದೇ ಮುಖ್ಯ” ಎಂದು ಅವರು ಹೇಳಿದ್ದಾರೆ.

ಆಟಕ್ಕೆ ಗೌರವ ಕೊಟ್ಟರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಈ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಅನುಭವಿಸುವುದು ಅದ್ಭುತ. ಆದರೆ ಕೆಲವೊಮ್ಮೆ ಅದು ಭಯಾನಕ ಭಾವನೆಯೂ ಆಗಬಹುದು. ಈ ಮಾತುಗಳು ಅಭಿಮಾನಿಗಳ ಮನಸ್ಸನ್ನು ಮುಟ್ಟಿವೆ.