ಶನಿವಾರ, 24 ಅಕ್ಟೋಬರ್ 2026

Rishab Shetty : ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ರಿಷಬ್ ಶೆಟ್ಟಿ ಅಚ್ಚರಿ ಪ್ರತಿಕ್ರಿಯೆ

Rishab Shetty : ನಟ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಆರಂಭವಾಗಿವೆ. ಇದೀಗ ರಶ್ಮಿಕಾ ಮಂದಣ್ಣವನ್ನು ಸಿನಿ ಇಂಡಸ್ಟ್ರಿಗೆ ಪರಿಚಯಿಸಿದ ರಿಷಬ್ ಶೆಟ್ಟಿಯವರು ಆಕೆಯ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ರಶ್ಮಿಕಾ, ವಿಜಯ್ ದೇವರಕೊಂಡ ಅವರನ್ನು ಪ್ರೀತಿಸಿ ಇದೀಗ ವಿವಾಹ ಆಗುತ್ತಿದ್ದಾರೆ. ಆದರೆ ಆಶ್ಚರ್ಯ ಅಂದ್ರೆ ರಶ್ಮಿಕಾ ಯಶಸ್ಸಿಗೆ ಕಾರಣಕರ್ತರಾದ ಶೆಟ್ಟಿ ಗ್ಯಾಂಗಿನ ಸದಸ್ಯರ್​ಯಾರನ್ನೂ ಸಹ ರಶ್ಮಿಕಾ ಮದುವೆಗೆ ಆಮಂತ್ರಿಸಿಲ್ಲ. 

ಇತ್ತೀಚೆಗಷ್ಟೆ ಈ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ತಮಾಷೆ ಮಾಡಿದ್ದರು. ಇದೀಗ ನಟ ರಿಷಬ್ ಶೆಟ್ಟಿ ಈ ಮದುವೆ ಬಗ್ಗೆ ಅಚ್ಚರಿಯ ರಿಪ್ಲೇ ನೀಡಿದ್ದಾರೆ. ಅಂದರೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿ ಮಾಧ್ಯಮದವರು ರಶ್ಮಿಕಾರ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬೈ ಹೇಳಿ ಹೊರಟಿದ್ದಾರೆ.