ಭಾನುವಾರ, 25 ಅಕ್ಟೋಬರ್ 2026
Trending

Rashmika-Vijay : ರಶ್ಮಿಕಾ- ವಿಜಯ್ ಮದುವೆಗೆ ಕೇವಲ 100 ಮಂದಿಗೆ ಮಾತ್ರ ಆಹ್ವಾನ !!

Rashmika-Vijay : ನಟ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು (ಫೆಬ್ರವರಿ 25) ಮತ್ತು ನಾಳೆ (ಫೆಬ್ರವರಿ 26) ಹಳದಿ, ಮೆಹಂದಿ ಮತ್ತು ಮಾಂಗಲ್ಯಧಾರಣೆಯಂಥಹ ಪ್ರಮುಖ ಕಾರ್ಯಗಳು ನಡೆಯಲಿವೆ. ರಶ್ಮಿಕ- ವಿಜಯ್ ದೇವರಕೊಂಡ ಮದುವೆ ಅತ್ಯಂತ ಪ್ರೈವೇಟ್ ಆಗಿ ನಡೆಯಲಿದ್ದು ಕೇವಲ ನೂರು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ.

Sponsored

ಯಸ್, ವರದಿಗಳ ಪ್ರಕಾರ, ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಿವಾಹದ ಸಮಯದಲ್ಲಿ ಕಟ್ಟುನಿಟ್ಟಾಗಿ ಫೋನ್ ಬಳಕೆ ನಿಷೇಧಿಸಲಾಗಿದೆ. ಮದುವೆಗೆ ಕೇವಲ 100 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಇನ್ನುಳಿದ ಸ್ನೇಹಿತರಿಗಾಗಿ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.

ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಸಂಬಂಧಿಗಳು ಕಳೆದ ಒಂದು ವಾರದಿಂದಲೂ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಕೆಲವೇ ಕೆಲವು ಅತ್ಯಾಪ್ತ ಗೆಳೆಯ-ಗೆಳತಿಯರನ್ನಷ್ಟೆ ಮದುವೆಗೆ ಆಹ್ವಾನಿಸಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ. ಈಗಾಗಲೇ ಕೆಲವು ಗೆಳೆಯರು, ಚಿತ್ರರಂಗದ ಕೆಲವು ಪ್ರಮುಖರು ಉದಯಪುರ ತಲುಪಿದ್ದು ಮದುವೆಯಲ್ಲಿ ಭಾಗಿ ಸಹ ಆಗಿದ್ದಾರೆ. ಅಂಥಹವರ ಪಟ್ಟಿ ಇಲ್ಲಿದೆ ನೋಡಿ.

ತರುಣ್ ಭಾಸ್ಕರ್ ಮತ್ತು ಇಶಾ ರೆಬ್ಬಾ ಅವರುಗಳು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಯಲ್ಲಿ ಭಾಗಿ ಆಗಿದ್ದಾರೆ. ತರುಣ್ ಭಾಸ್ಕರ್, ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಪೆಳ್ಳಿ ಚೂಪುಲು’ ಸಿನಿಮಾದ ನಿರ್ದೇಶಕ. ವಿಜಯ್ ಅವರಿಗೆ ನಾಯಕನಾಗಿ ಅವಕಾಶ ಕೊಟ್ಟ ಮೊದಲ ನಿರ್ದೇಶಕ. 

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರಿಗೂ ಆಪ್ತವಾಗಿರುವ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಅವರು ಸಹ ಮದುವೆಯಲ್ಲಿ ಭಾಗಿ ಆಗಿದ್ದರು. ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಸಹ ರಶ್ಮಿಕಾ-ವಿಜಯ್ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಆಶಿಕಾ ರಂಗನಾಥ್ ಅವರು ರಶ್ಮಿಕಾರ ಆಪ್ತ ಗೆಳತಿಯರಲ್ಲಿ ಒಬ್ಬರು ಎನ್ನಲಾಗುತ್ತಿದೆ.

ರಶ್ಮಿಕಾರ ಈ ಹಿಂದಿನ ಸಿನಿಮಾ ‘ದಿ ಗರ್ಲ್​​ಫ್ರೆಂಡ್’ ನಿರ್ದೇಶನ ಮಾಡಿರುವ ನಿರ್ದೇಶಕ ರಾಹುಲ್ ರವಿಂದ್ರನ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ‘ದಿ ಗರ್ಲ್​ಫ್ರೆಂಡ್’ ನಿರ್ದೇಶನದ ವೇಳೆ ರಶ್ಮಿಕಾ ಹಾಗೂ ರಾಹುಲ್ ನಡುವೆ ಒಳ್ಳೆಯ ಗೆಳೆತನ ಏರ್ಪಟ್ಟಿದೆ. ಇವರಷ್ಟೆ ಅಲ್ಲದೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ಇನ್ನೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ವಿಜಯ್-ರಶ್ಮಿಕಾ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.