ಮಂಗಳವಾರ, 27 ಅಕ್ಟೋಬರ್ 2026
Trending

Bengaluru : 42ರ ಆಂಟಿ ಜೊತೆ 28ರ ಜಿಮ್ ಟ್ರೈನರ್‌ಗೆ ಅಫೇರ್- ಅಂಟಿಯ ಬ್ಲಾಕ್ ಮೇಲ್‌ಗೆ ಸಿಲುಕಿ ವಿಡಿಯೋ ಕಾಲ್ ನಲ್ಲೇ ಯುವಕ ಸಾವು

Bengaluru : ಜಿಮ್‌ಗೆ ಬರುತ್ತಿದ್ದ ವಿವಾಹಿತ ಮಹಿಳೆಯೊಬ್ಬರ ಬ್ಲಾಕ್‌ಮೇಲ್ ಹಾಗೂ ಕಿರುಕುಳ ತಾಳಲಾರದೆ ಯುವ ಬಾಡಿ ಬಿಲ್ಡರ್ ದಿಲೀಪ್ (28) ಎಂಬುವವರು ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ (Nelamangala)ನಡೆದಿದೆ.

Sponsored

ದಿಲೀಪ್ (28) ಮೃತ ಯುವಕ. ಈತ ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ (Fitness Trainer) ಆಗಿ ಕೆಲಸ ಮಾಡಿಕೊಂಡಿದ್ದರು. ಇದೀಗ ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ (BlackMali) ಸಿಲುಕಿ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

Advertisement
Advertisement

ಬಲೆಗೆ ಬೀಳಿಸಿಕೊಂಡಿದ್ಲಾ ಆಂಟಿ?

ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆಯ (Married Woman) ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ನಂತರ ಆಕೆ ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆಯ ಬ್ಲ್ಯಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

ಮನೆ ಬರೆದುಕೊಡುವಂತೆ ಟಾರ್ಚರ್?

ಮೃತ ದಿಲೀಪ್ ತಂದೆ ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ‘ಯೋಗಿತಾ ನನ್ನ ಮಗನಿಗೆ ವಿಪರೀತ ಚಿತ್ರಹಿಂಸೆ ನೀಡುತ್ತಿದ್ದಳು. ದಿಲೀಪ್ ಹೆಸರಿನಲ್ಲಿದ್ದ ಮನೆಯನ್ನು ತನ್ನ ಮಗನ ಹೆಸರಿಗೆ ಬರೆದುಕೊಡುವಂತೆ ಟಾರ್ಚರ್ ನೀಡುತ್ತಿದ್ದಳು. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ದಿಲೀಪ್‌ ಜೊತೆಗೆ ಸಂಬಂಧದಲ್ಲಿದ್ದಳು ಎನ್ನಲಾದ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಮ್‌ ಮೂಲಕ ದಿಲೀಪ್‌ ಸಹೋದರನಿಗೆ ಮೆಸೇಜ್‌ ಮಾಡಿದ್ದಾಳೆ. ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ದಿಲೀಪ್‌ ಸಹೋದರ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ

Advertisement