ಬಂಟ್ವಾಳ ಯುವತಿ ಹತ್ಯೆ: ಆರೋಪಿ ಬಂಧಿಸಿ ಕಠಿಣ ಶಿಕ್ಷೆಗೆ ವಿಹಿಂಪ-ಬಜರಂಗದಳ ಪುತ್ತೂರು ಜಿಲ್ಲೆ ಆಗ್ರಹ
ಪುತ್ತೂರು: ಬಂಟ್ವಾಳದ ಬಿಸಿ ರೋಡ್‌ನಲ್ಲಿ ಇಂದು ಸಂಜೆ ನಡೆದ ಯುವತಿಯ ಅಮಾನುಷ ಹತ್ಯೆ ಪ್ರಕರಣವನ್ನು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸಿದೆ.
Sponsoredಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ, ಪ್ರಕರಣದ ಆರೋಪಿ ಯಾರೆ ಆಗಿರಲಿ ತಕ್ಷಣವೇ ಬಂಧಿಸಿ, ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಇಂತಹ ಅಮಾನವೀಯ ಕೃತ್ಯಗಳು ಸಮಾಜದಲ್ಲಿ ಆತಂಕ ಮೂಡಿಸುತ್ತಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್-ಬಜರಂಗದಳ ಪುತ್ತೂರು ಜಿಲ್ಲೆ ಒತ್ತಾಯಿಸಿದೆ.




