ಶುಕ್ರವಾರ, 30 ಅಕ್ಟೋಬರ್ 2026
Trending

ಸುರತ್ಕಲ್‌: ಅವಮಾನದಿಂದ ಪತಿ ಆತ್ಮಹತ್ಯೆ: ಪತ್ನಿ ದೂರು

Advertisement
Advertisement

ಸುರತ್ಕಲ್: ತನ್ನ ಪತಿಯ ಸಾವಿಗೆ ಯುವಕ – ಯುವತಿ ಬೆದರಿಕೆ, ಕಿರುಕುಳವೇ ಕಾರಣ ಎಂದು ಮೃತ ಸೋಮನಾಥ್ ಪತ್ನಿ ಸರಿತಾ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ. 27ರಂದು ಹೊಸಬೆಟ್ಟು ನಿವಾಸಿ ಸೋಮನಾಥ್ ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವರ ಜತೆ ಇದ್ದ ಸ್ನೇಹಿತರು ನೀಡಿದ ಮಾಹಿತಿ ಸಹಿತ ದೂರಿನಲ್ಲಿ ಕಾರಣ ನೀಡಿದ್ದಾರೆ.

Sponsored

ಅ. 25ರ ರಾತ್ರಿ 12:15ಕ್ಕೆ ಬೀಚ್ ಬಳಿ ಬಂದ ಯುವಕ – ಯುವತಿ ಕಾರು ಪಾರ್ಕಿಂಗ್ ವಿಚಾರದಲ್ಲಿ ತಗಾದೆ ತೆಗೆದು ಜಗಳಕ್ಕೆ ಪ್ರೇರಿಸಿ ನಿಂದಿಸಿದ್ದರು. ಆಗ ಪತಿಯೂ ಬೈದಿದ್ದರು. ಪತಿಯಿಂದ ಯಾವುದೇ ಕಿರುಕುಳ ಆಗದಿದ್ದರೂ, ಹಿರಿಯ ಅಧಿಕಾರಿಗಳ ಪರಿಚಯವಿದೆ, ನಿಮ್ಮ ಬಗ್ಗೆ ಏನು ಮಾಡುತ್ತೇವೆ ನೋಡಿ ಎಂದು ಬೆದರಿಸಿ ಸುಳ್ಳು ಆರೋಪ ಹೊರಿಸಿ ಯುವತಿ ಪ್ರಕರಣ ದಾಖಲಿಸಿದ್ದಾರೆ. ಯುವಕ-ಯುವತಿಯಿಂದ ಕಮಿಷನರ್ ಹೆಸರು ಬಳಸಿ, ಕಾಲು ಹಿಡಿದು ಕ್ಷಮೆ ಕೇಳಿಸಿ ಅವಮಾನ ಮಾಡಿದ್ದಲ್ಲದೆ ಪದೇ ಪದೇ ಪೊಲೀಸ್ ಠಾಣೆಯಿಂದ ಕರೆ, ಕೋರ್ಟ್ ಕಚೇರಿಗೆ ಹೆದರಿ ಮಾನಸಿಕವಾಗಿ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

ಈ ಸಂದರ್ಭದಲ್ಲಿ ಹೊಸಬೆಟ್ಟು ಮೊಗವೀರ ಸಂಘದ ಪ್ರಮುಖರು, ಗಂಗಾಧರ ಎಚ್. ಗುರಿಕಾರರು, ಮಾಜಿ ಕಾರ್ಪೊರೇಟರ್ ನಯನ ಆರ್. ಕೋಟ್ಯಾನ್, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement
Advertisement