ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪದಡ್ಕ ಬಳಿ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಸುಮಾರು ಎಂಟು ಗಂಟೆಗೆ ಮೈಂದನಡ್ಕ ಕಡೆಯಿಂದ ಬಂದ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ನಂತರ ಹೆಚ್.ಸಿ.ನಾಗರಾಜ್ ಮೋಟಾರ್ ಸೈಕಲ್‌ನಲ್ಲಿ ಬೆನ್ನಟ್ಟಿ ವಾಹನ ತಡೆದು ನಿಲ್ಲಿಸಿದರು.
Sponsoredಪರಿಶೀಲನೆ ವೇಳೆ ದನವೊಂದು ಕಂಡು ಬಂದಿದ್ದು, ದನ ಸಾಗಾಟಕ್ಕೆ ಪರವಾನಗಿ ಅಥವಾ ಪಶುವೈದ್ಯಾಧಿಕಾರಿಯವರ ಪ್ರಮಾಣ ಪತ್ರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಪಿಕಪ್ ಚಾಲಕ ಕಾಸರಗೋಡಿನ ಸೀತಾರಾಮ (54) ಎಂದು ಗುರುತಿಸಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




