ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ನ ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ನಾಥ್ ಇವರನ್ನು ಗದಗ ಕಪ್ಪತ್ತಗಿರಿ ಫೌಂಡೇಶನ್ (ರಿ) ಕಳಾಸಪುರ ಗದಗ ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯಘಟಕ ಕಳಾಸಪುರ ಗದಗ ಇಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2026 ನೀಡಿ ಗೌರವಿಸಿದೆ.
ಕಪ್ಪತ್ತಗಿರಿ ಫೌಂಡೇಶನ್ ಸುಮಾರು 10 ವರ್ಷದಿಂದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದಾರೆ. ಪ್ರಸ್ತುತ ಈ ವರ್ಷ 20 ಜಿಲ್ಲೆಯಿಂದ ಒಬ್ಬ ಸಾಧಕ ಶಿಕ್ಷಕನನ್ನು ಗುರುತಿಸಿ ಸೆಫ್ಟೆಂಬರ್ 20ರಿಂದ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆ ಕೆ.ಸಿ ರಾಣಿ ರೋಡ್ ಗದಗ ಇಲ್ಲಿ ಸನ್ಮಾನಿಸಲಾಯಿತು.
Sponsoredಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ನಾಥ್ ಇವರನ್ನು ಅವರ 30 ವರ್ಷದ ಸುದೀರ್ಘ ಶಿಕ್ಷಣ ಸೇವೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿದ ಶೈಕ್ಷಣಿಕ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಮ್ಮೇಳನಾಧ್ಯಕ್ಷರಾದ ಡಾ. ನಿಂಗು ಸೊಲಗಿ ಮಕ್ಕಳ ಸಾಹಿತಿ ಮುಂಡಗಿ ಇವರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಷ.ಬ್ರ.ಶ್ರಿ ಫಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಓಂಕಾರೇಶ್ವರ ಹಿರೇಮಠ (ಭೂ ಕೈಲಾಸ , ಕಳಾಸಪುರ , ಗದಗ, ಸಮ್ಮೇಳನಾಧ್ಯಕ್ಷರಾದ ಡಾ ನಿಂಗು ಸೊಲಗಿ ಮಕ್ಕಳ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತರು ಮುಂಡರಗಿ, ಶ್ರೀ ಸೋಮಲಿಂಗ ಗೆಣ್ಣೂರು ಕೆ.ಎ.ಎಸ್ ಕುಲಸಚಿವರು ಬಾಗಲಕೋಟೆ ವಿಶ್ವವಿದ್ಯಾನಿಲಯ ಜಮಖಂಡಿ ಇವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಇವರು ರಚಿಸಿರುವ ವಿವಿಧ ಜಾನಪದ ಪ್ರಕಾರಗಳ ನವ್ಯರೇಖಾ ಚಿತ್ರಗಳ ಪ್ರದರ್ಶನ ಜರಗಿತು. ಈ ಪ್ರದರ್ಶನ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಗೋಕುಲ್ ನಾಥ್ ಪಿ.ವಿ ಇವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಚಂದ್ರಕಲಾ ಇಟಗಿಮಠ ಸಂಸ್ಥಾಪಕ ಅಧ್ಯಕ್ಷರು ಕಪ್ಪತ್ತಗಿರಿ ಫೌಂಡೇಶನ್, ಕಳಾಸಪುರ ಗದಗ ರವೀಂದ್ರನಾಥ ಜಂ. ದೊಡ್ಡಮೇಟಿ ಮುಂತಾದ ಹಲವಾರು ಗಣ್ಯರು, ಸಾಹಿತಿಗಳು, ಬರಹಗಾರರು ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





