ಭಾನುವಾರ, 25 ಅಕ್ಟೋಬರ್ 2026
Trending

ಶಬರಿಮಲೆಯಲ್ಲಿ ಬಂಗಾರದ ಕಿರೀಟ ನಾಪತ್ತೆ, ನಕಲಿ ಪತ್ತೆ!

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಳುವಾದ ಸಲಿ ಕಿರೀಟದ ಜಾಗದಲ್ಲಿ ಅಷ್ಟೇ ಗಾತ್ರ ಮತ್ತು ವಿನ್ಯಾಸ ಹೊಂದಿರುವ ನಕಲಿ ಕಿರೀಟವನ್ನು ಇಡಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

Sponsored

ಕೇರಳ ಹೈಕೋರ್ಟ್‌ ನಿರ್ದೇಶದಂತೆ ಲೆಕ್ಕಪರಿಶೋಧನೆ ಸೆಪ್ಟೆಂಬರ್‌ನಲ್ಲಿ ನಡೆದಿದ್ದು, ಪರಿಶೋಧನೆ ಮಾಡುವಾಗ ಈ ಭಾರೀ ವಂಚನೆ ಬೆಳಕಿಗೆ ಬಂದಿದೆ. ಅಸಲಿ ಕಿರೀಟವು 55.72 ಪವನ್‌ (ಸುಮಾರು 445.78 ಗ್ರಾಂ) ತೂಕ ಹೊಂದಿದ್ದು, ನಕಲಿ ಕಿರೀಟವು ಕೇವಲ 240 ಗ್ರಾಂ ತೂಗುತ್ತಿದೆ. ಅಸಲಿ ಕಿರೀಟವನ್ನು ಕದ್ದು ನಕಲಿ ಕಿರೀಟವನ್ನು ತಂದಿಡಲಾಗಿದೆ ಎಂಬುವುದು ತನಿಖಾಧಿಕಾರಿಗಳ ಬಲವಾದ ಶಂಕೆಯಾಗಿದೆ.