Home » ಪುತ್ತೂರು: ಹಲ್ಲೆ ಮಾಡಬೇಡಿ ಎಂದು ಬಿಡಿಸಲು ಹೋದವರಿಗೆ ಹಲ್ಲೆ

ಪುತ್ತೂರು: ಹಲ್ಲೆ ಮಾಡಬೇಡಿ ಎಂದು ಬಿಡಿಸಲು ಹೋದವರಿಗೆ ಹಲ್ಲೆ

0 comments
Panambur

ಪುತ್ತೂರು: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುವುದನ್ನು ತಡೆಯಲು ಹೋದ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರಿನ ಕೆಳಗಿನಮನೆ ನಿವಾಸಿಗಳಾದ ಪ್ರಜ್ವಲ್‌ ರೈ (32), ಶಿವಕುಮಾರ್‌ (35) ಹಾಗೂ ರೋಹಿತ್‌ (35) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಸಾದ್‌ ಎಂಬುವವರು ಶಿವಕುಮಾರ್‌ಗೆ ಹಲ್ಲೆ ನಡೆಸುತ್ತಿದ್ದ ವೇಳೆ ಇವರ ಸ್ನೇಹಿತರಾದ ಪ್ರಜ್ವಲ್‌ ರೈ ಹಾಗೂ ರೋಹಿತ್‌ ಸ್ಥಳಕ್ಕೆ ಬಂದು ಹಲ್ಲೆ ತಡೆಯಲು ಯತ್ನ ಮಾಡಿದ್ದು, ಈ ವೇಳೆ ಪ್ರಸಾದ್‌ ಅವರು ಪ್ರಜ್ವಲ್‌ ರೈ ಹಾಗೂ ರೋಹಿತ್‌ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಜ್ವಲ್‌ ರೈ ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You may also like