ಶನಿವಾರ, 24 ಅಕ್ಟೋಬರ್ 2026

ಮದ್ಯದ ಅಮಲಿನಲ್ಲಿ 9 ತಿಂಗಳ ಹೆಣ್ಣುಮಗುವನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ತಾಯಿ!

ಮದ್ಯದ ಅಮಲಿಯಲ್ಲಿ ತಾಯಿಯೋರ್ವಳು ತನ್ನ ಕರುಳು ಕುಡಿಯನ್ನೇ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಪೊಲೀಸರು ತಾಯಿಯನ್ನು ಬಂಧನ ಮಾಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಇಂಜಾಪುರ ನಿವಾಸಿ ಲೋಕಸಾನಿ ರಾಜೇಶ್ವರಿ (34) ಅವರಿಗೆ 9 ತಿಂಗಳ ಮಗಳು ಅನುರಾಧ ಇದ್ದಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದ ರಾಜೇಶ್ವರಿ ಬೈರಾಮಲ್ಗುಡ ಕೆರೆಯ ಬಳಿ ಮಗುವನ್ನು ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಆರೋಪವಿದೆ.

ಮಾಹಿತಿ ತಿಳಿದ ಎಲ್‌ಬಿ ನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಕೆರೆಯಿಂದ ಮಗುವಿನ ಮೃತದೇಹವನ್ನು ಹೊರತೆಗೆದಿದ್ದು, ನಂತರ ಮರಣೋತ್ತರ ಪರೀಕ್ಷೆಗೆಂದು ಮೃತದೇಹವನ್ನು ಉಸ್ಮಾನಿಯ ಜನರಲ್‌ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಾಜೇಶ್ವರಿ ಘಟನೆ ವೇಳೆ ತೀವ್ರ ಮದ್ಯದ ಅಮಲಿನಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.