ಆರ್ಟಿಐ ಕಾರ್ಯಕರ್ತರೊಬ್ಬರು ಅಭಿಜೀತ್ ಡಿಪ್ಕೆ ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದ ಮರುದಿನವೇ, ‘ಕಾಕ್ರೋಚ್ ಜನತಾ ಪಾರ್ಟಿ’ಯ ಸ್ಥಾಪಕರಾದ ದಿಪ್ಕೆ, ಅಮೆರಿಕದಲ್ಲಿನ ತಮ್ಮ ಶಿಕ್ಷಣಕ್ಕೆ ಬೋಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನ ಮತ್ತು ಶಿಕ್ಷಣ ಸಾಲವೇ ಆಧಾರವಾಗಿದ್ದವು ಎಂದು ಸ್ಪಷ್ಟಪಡಿಸಿದರು.
ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರೊಂದಿಗೆ ಮಾತನಾಡಿದ ದಿಪ್ಕೆ, ವಿದೇಶದಲ್ಲಿನ ತಮ್ಮ ಉನ್ನತ ಶಿಕ್ಷಣಕ್ಕೆ ಕುಟುಂಬದ ಅಸ್ಪಷ್ಟ ಮೂಲದ ಸಂಪತ್ತನ್ನು ಬಳಸಲಾಗಿತ್ತು ಎಂಬ ಆರೋಪಗಳನ್ನು ತಳ್ಳಿಹಾಕಿದರು.
“ನನ್ನ ಶಿಕ್ಷಣಕ್ಕೆ ಬೋಸ್ಟನ್ ವಿಶ್ವವಿದ್ಯಾಲಯ ನೀಡಿದ ವಿದ್ಯಾರ್ಥಿವೇತನದಿಂದ ಹಣಕಾಸಿನ ನೆರವು ಸಿಕ್ಕಿತ್ತು. ಜೊತೆಗೆ, ನಾನು ಸ್ವಲ್ಪ ಶಿಕ್ಷಣ ಸಾಲವನ್ನೂ ಪಡೆದಿದ್ದೆ, ಅದನ್ನು ಈಗ ಮರುಪಾವತಿಸಬೇಕಿದೆ,” ಎಂದು ಹೇಳಿದ ಡಿಪ್ಕೆ, ತಮ್ಮ ವಿದ್ಯಾರ್ಥಿವೇತನದ ಪತ್ರವನ್ನೂ ಪ್ರದರ್ಶಿಸಿದರು.



