140
ಚೆನ್ನೈ: ತಮಿಳುನಾಡಿನ ಈರೋಡ್‌ನ ಸರಕಾರಿ ಶಾಲೆಯೊಂದರಲ್ಲಿ ಉಚಿತ ಉಪಹಾರದ ಸಾಂಬಾರ್‌ನಲ್ಲಿ ಸಗಣಿಯ ಪುಡಿಯನ್ನು ಬೆರೆಸುವಂತೆ ವಿದ್ಯಾರ್ಥಿಯೊಬ್ಬನನ್ನು ಒತ್ತಾಯ ಮಾಡಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧನ ಮಾಡಲಾಗಿದೆ. ಆ.29 ರಂದು ಈ ಘಟನೆ ನಡೆದಿದ್ದು, ಸೆ.1 ರಂದು ದೂರು ದಾಖಲು ಮಾಡಲಾಗಿದೆ.


ಆರೋಪಿಯನ್ನು ಆರುಮುಗಮ್ ಎಂದು ಗುರುತಿಸಲಾಗಿದೆ.
ಈತನ ಪತ್ನಿಯನ್ನು ಶಾಲೆಯ ಅಡುಗೆ ಸಿಬ್ಬಂದಿ ಕೆಲಸದಿಂದ ವಜಾ ಮಾಡಿದ ದ್ವೇಷದಿಂದ ಆರುಮುಗಮ್ ಈ ಕೃತ್ಯವೆಸಗಿದ್ದು, ಪರೀಕ್ಷೆಗಾಗಿ ಶಿಕ್ಷಕರಿಗೆ ನೀಡುವ ಆಹಾರದಲ್ಲಷ್ಟೇ ಸಗಣಿ ಮಿಶ್ರಣವಾಗಿತ್ತು.