Home » ಕಡಬ: ಪತ್ನಿಗೆ ಹಲ್ಲೆ ಆರೋಪ, ವಿಷ ಸೇವಿಸಿದ ಪತಿ!!

ಕಡಬ: ಪತ್ನಿಗೆ ಹಲ್ಲೆ ಆರೋಪ, ವಿಷ ಸೇವಿಸಿದ ಪತಿ!!

0 comments

ಕೌಟುಂಬಿಕ ಕಲಹದಲ್ಲಿ ಗಂಡನು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಂಡತಿಯು ಕಂಪ್ಲೇಂಟ್ ನೀಡಿದ್ದು, ಬಳಿಕ ವಿಷಯ ತಿಳಿದು ಗಂಡನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೂದ್ಮೂರು ಗ್ರಾಮದಲ್ಲಿ ನಡೆದಿದೆ 

ಘಟನೆಗೆ ಸಂಬಂಧಿಸಿದಂತೆ ಗಾಯಾಳು ಪತ್ನಿ ಸುಚಿತ್ರಾ ಪಿ.ಜೆ. (38) ನೀಡಿದ ದೂರಿನ ಮೇರೆಗೆ, ಆರೋಪಿ ಪತಿ ಚಿದಾನಂದ ಕೆ. ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸುಚಿತ್ರ ಅವರು ನೀಡಿದ ದೂರಿನ ಪ್ರಕಾರ ಸುಮಾರು ನಾಲ್ಕು ವರ್ಷಗಳ ಹಿಂದೆ ಅವರು ಚಿದಾನಂದ ಎಂಬುವರನ್ನು ಮದುವೆಯಾಗಿದ್ದರು. ಸೆ.6ರಂದು ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಕಲಹ ಉಂಟಾಗಿದ್ದು. ಈ ವೇಳೆ ಚಿದಾನಂದ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಚಿತ್ರಾ ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆಯಿಂದ ಕುಸಿದುಬಿದ್ದಿದ್ದ ಸುಚಿತ್ರಾ ಅವರನ್ನು ನೆರೆಮನೆಯವರು ಉಪಚರಿಸಿದ್ದು, ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಹಲ್ಲೆ ಆರೋಪ ಎದುರಿಸುತ್ತಿರುವ ಚಿದಾನಂದ ಅವರು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸುಚಿತ್ರಾ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಆರೋಪಿ ಆಸ್ಪತ್ರೆಯಿಂದ ಚಿಕಿತ್ಸೆಯ ಬಳಿಕ ಬಿಡುಗಡೆಗೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

You may also like