Home » ಪುತ್ತೂರು : ಅವಳಿ ಮಕ್ಕಳಿಗೆ SIR ನೋಟಿಸ್ ಜಾರಿ!!

ಪುತ್ತೂರು : ಅವಳಿ ಮಕ್ಕಳಿಗೆ SIR ನೋಟಿಸ್ ಜಾರಿ!!

0 comments

ಪುತ್ತೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವೇಳೆ ವಿಚಿತ್ರ ಲೋಪವೊಂದು ಬೆಳಕಿಗೆ ಬಂದಿದೆ.

ಪಾಲಕರ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಜೋಡಣೆ ಮಾಡಲು ಮುಂದಾದ ಅವಳಿ ಮಕ್ಕಳಿಗೆ ಇಬ್ಬರ ಜನನದ ನಡುವೆ 9 ತಿಂಗಳ ಅಂತರ ಇಲ್ಲ ಎಂಬ ಕಾರಣವನ್ನು ನೀಡಿ ಹಲವು ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ.

ವಾಸ್ತವವಾಗಿ ಇವರು ಅವಳಿ ಮಕ್ಕಳಾಗಿದ್ದು, ಇಬ್ಬರ ಜನ್ಮ ದಿನಾಂಕ ಒಂದೇ ಆಗಿದೆ. ಇದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಪರಿಶೀಲನೆಗೆ ಹಾಜರಾಗುವಂತೆ ಆಯೋಗ ಸೂಚಿಸಿದೆ.

ಇನ್ನೂ ತಂತ್ರಾಂಶದಲ್ಲಿನ ತಾಂತ್ರಿಕ ದೋಷದಿಂದ ಉಂಟಾಗಿದ್ದು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಚುನಾವಣಾ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

You may also like