ಶನಿವಾರ, 24 ಅಕ್ಟೋಬರ್ 2026

ಹುಡುಗಿಯರ ದಂಧೆ-ನಟೋರಿಯಸ್‌ ಪಿಂಪ್‌ ಬಂಧನ

ಬೆಂಗಳೂರು: ಹುಡುಗಿಯರನ್ನು ಇಟ್ಟುಕೊಂಡು ದಂಧೆ ಮಾಡುತ್ತಿದ್ದ ನಟೋರಿಯಸ್‌ ಪಿಂಪ್‌ನನ್ನು ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.

ಚೇತನ್‌ ಕುಮಾರ್‌@ ಮಂಗಳಮುಖಿ ಚೇತನ್‌ (40) ಬಂಧಿತ ಆರೋಪಿ.

ನಟೋರಿಯಸ್‌ ಪಿಂಪ್‌ ಚೇತನ್‌ ವಿರುದ್ಧ ಪೀಣ್ಯಾ, ಬಾಗಲಕೋಟೆ, ಸಿಸಿಬಿ ಸೇರಿ ಹಲವು ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಈತ ಮಂಗಳಮುಖಿ ವೇಷ ಧರಿಸಿ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ. ಹೊರ ರಾಜ್ಯದಿಂದ ಹುಡುಗಿಯರನ್ನು ಕರೆತಂದು ದಂಧೆ ನಡೆಸುತ್ತಿದ್ದ.

ನಿನ್ನೆ ಜು.6 ರಂದು ಪೀಣ್ಯ ರೂಮ್‌ವೊಂದರಲ್ಲಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.