ಪೊಲೀಸ್ ಒಬ್ಬ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಕೇಳಿದರೆ ನಿಮಗೂ ಕೂಡ ಶಾಕ್ ಆಗುತ್ತೆ. ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್.
Sponsoredಉತ್ತರ ಪ್ರದೇಶದ ಹಮೀದ್‌ಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಟ್ರಕ್ ಡ್ರೈವರ್‌ನನ್ನು ಯಾಮಾರಿಸಿದ್ದು, ನಂತರ ಟ್ರಕ್ ಡ್ರೈವರ್ 13 ಕಿ ಮೀ ಅವನನ್ನು ಚೇಸ್ ಮಾಡಿ ಚೆನ್ನಾಗಿ ಭಾರಿಸಿಸದ್ದಾನೆ. ಘಟನೆ ಏನಂತಾ ನೋಡುವುದಾದರೆ, ಪೊಲೀಸ್ ಅಧಿಕಾರಿ ಘಟಂಪುರದಿಂದ ಹಮೀರ್‌ಪುರಕ್ಕೆ ಹೋಗುವ ದಾರಿಯಲ್ಲಿ ಟ್ರಕ್‌ವೊಂದಕ್ಕೆ ಲಿಫ್ಟ್ ಕೇಳಿದ್ದಾನೆ. ಅದಕ್ಕೆ ಇವರನ್ನು ಹತ್ತಿಸಿಕೊಂಡ ಟ್ರಕ್ ಡ್ರೈವರ್ ಮಾನವೀಯತೆ ಮೆರೆದರೆ, ಪೊಲೀಸ್‌ನು ಮೆತ್ತಗೆ ಲಾರಿ ಕ್ಯಾಬಿನ್‌ನಲ್ಲಿ 20,000 ಎಗರಿಸಿ, ಓಡಿ ಹೋಗಿದ್ದಾನೆ.
ಬಳಿಕ ಟ್ರಕ್ ಚಾಲಕನ ದುಡ್ಡು ಅಪಹರಿಸಿ ಓಡಿ ಹೋಗಿದ್ದ ಆರೋಪಿಯನ್ನು ಟ್ರಕ್ ಚಾಕ 13 ಕೀ.ಮೀ ಚೇಸ್ ಮಾಡಿ, ಅವನನ್ನು ಹಿಡಿದಿದ್ದಾನೆ. ಅಷ್ಟೇ ಅಲ್ಲ, ಸಿಕ್ಕ ತಕ್ಷಣ ಹಣ ವಸೂಲಿ ಮಾಡಿ, ನಡು ರಸ್ತೆಯಲ್ಲೇ ಕಾಲರ್ ಹಿಡಿದು, ತರಾಟೆಗೆ ತೆಗೆದುಗೊಂಡು ಧರ್ಮದೇಟು ನೀಡಿದ್ದಾನೆ. ಅಷ್ಟೇ ಅಲ್ಲ ವೈರಲ್ ವಿಡಿಯೋ ಬೆನ್ನಲ್ಲೇ ಸಬ್ ಇನ್‌ಸ್ಪೆಕ್ಟರ್ ತಕ್ಷಣ ಅಮಾನತುಗೊಳಿಸಿದ್ದಲ್ಲದೇ ಅರೆಸ್ಟ್ ಮಾಡಲಾಗಿದೆ. ಟ್ರಕ್ ಡ್ರೈವರ್ ನ ಧೈರ್ಯಕ್ಕೆ ಆತ ಮಾಡಿದ ಕೆಲಸಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




