ಪ್ರೀತಿಸಿದ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ, ಆಕೆಯನ್ನು ಬೈಕ್‌ನಲ್ಲಿ ಎಳೆದೊಯ್ದ ಘಟನೆಯೊಂದು ಬಿಹಾರದ ನಲಂದ ಜಿಲ್ಲೆಯ ರಾಜಗೀರ್ ಬಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Sponsoredವರದಿಗಳ ಪ್ರಕಾರ, ಸರಕಾರಿ ಉದ್ಯೋಗಿಯಾಗಿರುವ ಯುವಕ ಹಾಗೂ ಸಂತ್ರಸ್ತ ಯುವತಿ ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದರು, ಆದರೆ ಮನೆಯವರ ವಿರೋಧದ ನೆಪವೊಡ್ಡಿ ಯುವಕ ಮದುವೆಯಾಗಲು ನಿರಾಕರಿಸಿದ್ದನು. ಈ ವಿಷಯವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ನಂತರ ಜಗಳಕ್ಕೆ ತಿರುಗಿದೆ. ಯುವಕ ಅಲ್ಲಿಂದ ಬೈಕ್‌ನಲ್ಲಿ ಹೊರಡಲು ಹೋದಾಗ, ಯುವತಿ ಆತನ ಬೈಕ್‌ನ ಹ್ಯಾಂಡಲ್ ಹಿಡಿದು ತಡೆದಿದ್ದಾಳೆ. ಆದರೂ ಯುವಕ ವಾಹನ ನಿಲ್ಲಿಸದೇ ಮುನ್ನಡೆದಿದ್ದು, ಯುವತಿ ಎಳೆಯಲ್ಪಟ್ಟಿದ್ದಾಳೆ.
Marriage AdSponsoredರಸ್ತೆಯಲ್ಲಿ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದು, ಸಾರ್ವಜನಿಕರು ಆಕ್ರೋಶಗೊಂಡು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕನನ್ನು ಥಳಿಸಲೆಂದು ಮುಂದೆ ಬಂದಾಗ ಇತರರು ತಡೆದಿದ್ದಾರೆ. ಯುವತಿಯು ನಾವಡಾ ಜಿಲ್ಲೆಯ ನಾರ್ದಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ.
SHOCKING INCIDENT IN BIHAR🚨
– A video from Nalanda, Bihar allegedly shows a man dragging his wife with a motorcycle. The incident has sparked outrage on social media.
Follow me @MyCric101#Bihar #Nalanda #ViralVideo #IndiaNews #biharpolice https://t.co/Yji0h1869J
— Daily Orbit (@DailyOrbit8) July 27, 2026




