ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪರಿಣಾಮ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಈ ಇಡೀ ಪ್ರತಿಭಟನೆಯ ಸೂತ್ರಧಾರ ಕಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜಿತ್ ದೀಪ್ಕೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಪ್ರತಿಭಟನೆಗೆ ಫಲ ಸಿಕ್ಕಿದ ಬೆನ್ನಲ್ಲೇ ಅಭಿಜಿತ್ ಅವರು ಮುಂದಿನ ಹೋರಾಟದ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದು ಎಂಬ ಘೋಷಣೆ ಹೊರಡಿಸಿದ್ದರು. ಆದರೆ ಇದೀಗ ಅವರ ತಾಯಿ “ಇನ್ನೂ ಹೋರಾಟ, ಗೀರಾಟ ಸಾಕು. ಇನ್ನೇನಿದ್ರೂ ಅವನಿಗೆ ಡಿಸೆಂಬರ್ ಒಳಗೆ ಮದುವೆ ಮಾಡಿಸಬೇಕು” ಎಂಬ ಸ್ಟೇಟ್ಮೆಂಟ್ ಪಾಸ್ ಮಾಡಿದ್ದಾರೆ.
Sponsoredಹೌದು, ಪ್ರತಿಭಟನೆ ಮುಗಿಸುಕೊಂಡು ಮನೆ ಸೇರಿರುವ ಮಗನ ಬಗ್ಗೆ ಖಾಸಗಿ ಪತ್ರಿಕೆಯೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅನಿತಾ ದೀಪ್ಕೆ ಮಗನ ಮದುವೆ ಬಗ್ಗೆ ಮೌನ ಮುರಿದ್ದಿದ್ದಾರೆ. ನನ್ನ ಮಗನಿಗೆ ಈಗ 30 ವರ್ಷ. ಅವನು ಬೊಸ್ಟನ್ನಲ್ಲಿದ್ದಾಗಲೇ ಹಲವು ಸಂಬಂಧಗಳು ಬಂದಿದ್ದವು. ಆದರೆ ನಮಗೆ ಅಷ್ಟು ಮೆಚ್ಚುಗೆ ಆಗಿರಲಿಲ್ಲ. ಮದುವೆ ಬಗ್ಗೆ ಅವನಿಗೆ ಕೇಳಿದಾಗ ಅವನು ನಾಚಿಕೊಂಡು, ಸಮ್ಮತಿಸಿದ್ದ ಎಂದು ದೀಪ್ಕೆ ತಾಯಿ ಎಂದಿದ್ದಾರೆ.
Marriage AdSponsoredಅಲ್ಲದೆ ಈಗ ಹೋರಾಟ, ಪ್ರತಿಭಟನೆ ಎಂದುಕೊಂಡು ಆತ ತಿರುಗಾಡುತ್ತಿದ್ದ. ಈ ಸಂದರ್ಭದಲ್ಲಿ ಮದುವೆಯ ಮಾತುಕತೆ ನಡೆಸಲು ಆಗುತ್ತಿರಲಿಲ್ಲ ಆದರೆ ಇನ್ನು ಮುಂದೆ ಈ ಹೋರಾಟ ಗೀರಾಟ ಎಲ್ಲ ಸಾಕು. ಅವನಿಗೆನಿದ್ದರೂ ಇನ್ನು ಮದುವೆ ಮಾಡಿಸಬೇಕು. ಅದು ಕೂಡ ಡಿಸೆಂಬರ್ ಒಳಗೆ ಮಾಡಿಸಿ ಕೈ ಬಿಡಬೇಕು ಎಂಬುದು ನಮ್ಮ ಆಸೆ ಎಂದು ಅವರು ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.




