ಸೋಮವಾರ, 26 ಅಕ್ಟೋಬರ್ 2026
Trending

ಒಬ್ಬನನ್ನೇ ವರಿಸಿದ ಮೂವರು ಸೋದರಿಯರು – ವಿಚಿತ್ರ ಮದುವೆಯ ಮಹಾ ನಾಟಕ ಇದೀಗ ಬಯಲು!

ಉತ್ತರ ಪ್ರದೇಶದಲ್ಲಿ ಮೂವರು ರೀಲ್ಸ್ ಮಾಡುವ ಸಹೋದರಿಯರು ತಮ್ಮ ಕ್ಯಾಮರಾಮ್ಯಾನ್ ನ ವರಿಸಿರುವ ಆಶ್ಚರ್ಯಕರ ಘಟನೆ ಒಂದು ಬೆಳಕಿಗೆ ಬಂದಿತ್ತು. ಜೊತೆಗೆ ತಾವೇಕೆ ಈ ನಿರ್ಧಾರವನ್ನು ಕೈಗೊಂಡೆವು ಎಂದು ಆ ಮೂವರು ಸಹೋದರಿಯರು ಕಾರಣವನ್ನು ಕೂಡ ನೀಡಿ ಎಲ್ಲರನ್ನು ಬೆರಗಾಗಿಸಿದ್ದರು. ಈ ಮದುವೆ ಬಗ್ಗೆ ಭಾರೀ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ ಈಗ ಈ ವಿಚಿತ್ರ ಮದುವೆಯ ಮಹಾ ನಾಟಕ ಬಯಲಾಗಿದೆ.

Sponsored

ಹೌದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಧೌರಿಯಾ ಗ್ರಾಮದವರಾದ ಸರೋಜಾ, ಸಾವಿತ್ರಿ ಮತ್ತು ಸಂತೋಷಾ ಎಂಬ ಮೂವರು ಸಹೋದರಿಯರು ಶ್ಯಾಮಪುರಿ ಗ್ರಾಮದ ವಿಕಾಸ್ (ವಿಕ್ಕಿ) ಎಂಬ ಯುವಕನನ್ನು ಮದುವೆಯಾಗಿದ್ದಾರೆ. ಇದಕ್ಕೆ ಉದಾಹರಣೆ ಸಮೇತ ಕಾರಣವನ್ನು ನೀಡಿದ್ದಾರೆ. ಕಳೆದ ಜುಲೈ 17ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಎರಡೂ ಕುಟುಂಬದ ಯಾರೊಬ್ಬರೂ ಕೂಡ ಮದುವೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ ಎಂದು ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಚಿಕ್ಕಂದಿನಿಂದಲೂ ಜತೆಯಾಗಿಯೇ ಬೆಳೆದ ನಮಗೆ ಮದುವೆಯ ನಂತರ ಪರಸ್ಪರ ಅಗಲಬೇಕಾಗುತ್ತದೆ ಎಂಬ ಭಯ ಕಾಡತೊಡಗಿತ್ತು. ಒಂದು ಹಂತದಲ್ಲಿ ಈ ವಿರಹದ ಭಯಕ್ಕೆ ಜೀವ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು. ಅಂತಿಮವಾಗಿ ಪ್ರತ್ಯೇಕವಾಗುವುದಕ್ಕಿಂತ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದು ಸೂಕ್ತ ಎಂದು ನಿರ್ಧರಿಸಿ, ತಮಗೆ ಸೂಕ್ತ ಎನಿಸಿದ ಹಾಗೂ ತಮ್ಮ ಅನುಬಂಧವನ್ನು ಅರ್ಥಮಾಡಿಕೊಂಡ ವಿಕಾಸ್‌ನನ್ನು ವರಿಸಲು ನಿರ್ಧರಿಸಿದ್ದಾಗಿ ಹಿರಿಯ ಸಹೋದರಿ ಸರೋಜಾ ಹೇಳಿದ್ದಾಳೆ ಎಂದು ಮಾಧ್ಯಮಗಳಲ್ಲಿ ವರದಿ ಕೂಡ ಆಗಿತ್ತು.

ಆದರೆ, ಈ ಮದುವೆ ಪ್ರಕರಣದಲ್ಲೀಗ ಅಸಲಿ ಸತ್ಯ ಹೊರಬಿದ್ದಿದ್ದು, ಮದುವೆಯಾದವರಲ್ಲಿ ಒಬ್ಬಳು ಅಪ್ರಾಪ್ತ ವಯಸ್ಕಳು ಎಂಬ ಅನುಮಾನದ ಮೇಲೆ ಉತ್ತರ ಪ್ರದೇಶದ ಬಾಲ ವಿಕಾಸ ಸಮಿತಿ ತನಿಖೆಗೆ ಆದೇಶಿಸಿತ್ತು. ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದ ಯುವತಿಯರು, ತಾವು ಮಾಡಿದ ಮಹಾ ಮೋಸವನ್ನು ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳಲು ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ಸುಳ್ಳು ಮದುವೆಯ ನಾಟಕ ಆಡಿದ್ದಾಗಿ ಅವರು ಲಿಖಿತ ಹೇಳಿಕೆಯಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.

ವಿಚಾರಣೆ ಎದುರಿಸಿದ ದೇವಿಕಾ ಅಲಿಯಾಸ್ ಸಾವಿತ್ರಿ ಎಂಬಾಕೆ, ತಾವು ಸೋದರಸಂಬಂಧಿಗಳೇ ಹೊರತು ಸ್ವಂತ ಸಹೋದರಿಯರಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಪೊಲೀಸ್ ತನಿಖೆ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಹೆದರಿ ನಿಜಾಂಶ ಹೇಳಲು ತಡಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಇತ್ತ ದೇವಾಲಯದ ಅರ್ಚಕರು ಸಹ ಇಂತಹ ಯಾವುದೇ ಮದುವೆ ತಮ್ಮ ಆವರಣದಲ್ಲಿ ನಡೆದಿಲ್ಲ ಎಂದು ಖಚಿತಪಡಿಸಿದ್ದು, ಫಾಲೋವರ್ಸ್ ಕ್ರೇಜ್‌ಗಾಗಿ ರಚಿಸಿದ ಈ ಕಟ್ಟುಕಥೆ ಈಗ ಬಯಲಾಗಿ ಸಾರ್ವಜನಿಕರ ಆಕ್ರೋಶಕ್ಕೆ ಈಡಾಗಿದೆ