ಮಂಗಳವಾರ, 27 ಅಕ್ಟೋಬರ್ 2026
Trending

ಜೈಲಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮತ್ತೊಂದು ಮೊಬೈಲ್‌ ಪತ್ತೆ

ಬೆಂಗಳೂರು, ಆ.17: ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿ ಮತ್ತೆ ಸುದ್ದಿ ಮಾಡಿದ್ದಾರೆ. ಫೋನ್‌, ಪೆನ್‌ ಡ್ರೈವ್‌ ಇಟ್ಟುಕೊಂಡು ಸಿಸಿಬಿ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮೊಬೈಲ್‌ ಪತ್ತೆಯಾಗಿದ್ದು ಮತ್ತೆ ಸಂಚಲನ ಮೂಡಿಸಿದೆ.

Sponsored

ಮೊನ್ನೆ ಅಷ್ಟೇ ಸಿಸಿಬಿ ದಾಳಿ ಮಾಡಿದ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌ ದೊರಕಿತ್ತು. ಇದೇ ಮತ್ತೆ ಜೈಲು ಅಧಿಕಾರಿಗಳು ದಾಳಿ ಮಾಡಿದಾಗ ಪ್ರಜ್ವಲ್‌ ಬಳಿ ಇನ್ನೊಂದು ಮೊಬೈಲ್‌ ಪತ್ತೆಯಾಗಿದೆ. ದೇವರ ಫೋಟೋ ಹಿಂದೆ ಇರಿಸಲಾಗಿದ್ದ ವಿವೋ ಕಂಪನಿಯ ಮೊಬೈಲ್‌ ಪತ್ತೆಯಾಗಿದೆ. ಸಿಮ್‌ ಇಲ್ಲದ ಸ್ವಿಚ್‌ ಆಫ್‌ ಆಗಿದ್ದ ಮೊಬೈಲ್‌ ಫೋನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೊಬೈಲ್‌ ಬಳಕೆ ಯಾರು ಮಾಡುತ್ತಿದ್ದರು ಎನ್ನುವ ಕುರಿತು ತನಿಖೆ ನಡೆಸಿದ್ದಾರೆ.

Advertisement
Advertisement
Advertisement