ಶನಿವಾರ, 24 ಅಕ್ಟೋಬರ್ 2026

Tamanna bhatiya: ಕೊನೆಗೂ ‘ವರ್ಮಾ’ ಜೊತೆಗಿನ ಪ್ರೀತಿಯ ಮರ್ಮಾ ಬಿಚ್ಚಿಟ್ಟ ತಮನ್ನಾ ಭಾಟಿಯ!! ಅಂದು ಏನೂ ಇಲ್ಲವೆಂದ ಮಿಲ್ಕಿ ಬ್ಯೂಟಿ ಇಂದು ಹೇಳಿದ್ದೇನು?

ಫಿಲ್ಮ್ ಕಂಪ್ಯಾನಿಯನ್(Film campainian) ಜೊತೆ ಮಾತನಾಡಿದ ತಮನ್ನಾ ಭಾಟಿಯಾ 'ವಿಜಯ್ ವರ್ಮಾ ಮತ್ತು ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ.

Tamanna bhatiya
Image source : Koimoi

Tamanna bhatiya:ಪಡ್ಡೆ ಹುಡುಗರ ನಿದ್ದೆ ಕದ್ದಿರೋ ಸೌತ್ ಇಂಡಿಯಾದ(South india) ಫೇಮಸ್ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna bhatiya)ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ತಮ್ಮ ಡೇಟಿಂಗ್ ವಿಚಾರದಲ್ಲಿ ದಕ್ಷ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಡೇಟಿಂಗ್ ವದಂತಿಯನ್ನು ತಮನ್ನಾ ತಳ್ಳಿ ಹಾಕಿದ್ದರು. ಆದರೀಗ ತಮನ್ನಾ ತಮ್ಮಿಬ್ಬರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

 

ಹೌದು, ಬಹುಭಾಷಾ ನಟಿ ತಮನ್ನಾ ಮತ್ತು ವಿಜಯ್ ಸಂಬಂಧಗಳ ಕುರಿತು ಸಾಮಾಜಿಕ ಜಾಲತಾಣ ಹಾಗೂ ಬಾಲಿವುಡ್​ನಲ್ಲಿ ಸಾಕಷ್ಟು ವದಂತಿಗಳು ಹರಡಿದ್ದವು. ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ(Vijay varma) ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು. ಆದರೀಗ ತಮನ್ನಾ ಭಾಟಿಯಾ ನಟ ವಿಜಯ್ ವರ್ಮಾ ಜತೆಗಿನ ಸಂಬಂಧದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

 

ಫಿಲ್ಮ್ ಕಂಪ್ಯಾನಿಯನ್(Film campainian) ಜೊತೆ ಮಾತನಾಡಿದ ತಮನ್ನಾ ಭಾಟಿಯಾ ‘ವಿಜಯ್ ವರ್ಮಾ ಮತ್ತು ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ. ಆವರನ್ನು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಆತ ನನಗೆ ತುಂಬಾ ವಿಶೇಷವಾದ ವ್ಯಕ್ತಿ. ಆತನೊಂದಿಗೆ ನನ್ನ ಬಾಂಧವ್ಯ ಉತ್ತಮವಾಗಿದೆ. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ’ ಎಂದಿದ್ದಾರೆ.

 

ಅಲ್ಲದೆ ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಬಣ್ಣಿಸಿದ್ದು, ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು ಎಂದು ಹೇಳಿಕೊಂಡಿದ್ದಾರೆ. ಮತ್ತು ಇಬ್ಬರೂ ಒಟ್ಟಿಗೆ ನಟಿಸಿರುವ ಲಸ್ಟ್ ಸ್ಟೊರೀಸ್ 2(love story 2) ಸಿನಿಮಾದ ಸೆಟ್​ನಲ್ಲಿಯೇ ನಮ್ಮ ಪ್ರೀತಿ ಶುರುವಾಯಿತು ಎಂದು ಸಹ ತಮನ್ನಾ ಹೇಳಿಕೊಂಡಿದ್ದಾರೆ.

ಅಂದಹಾಗೆ ಆದರೆ ಕೆಲವು ದಿನಗಳ ನಂತರ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ವಿಜಯ್ ಬಗೆಗಿನ ಸುದ್ದಿಗಳ ಬಗ್ಗೆ ಮಾತನಾಡಿ, ಅವೆಲ್ಲ ಗಾಳಿಸುದ್ದಿ ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕಿಲ್ಲ ಎಂದಿದ್ದರು. ಆದರೆ ಈಗ ತಮ್ಮ ಹಾಗೂ ವಿಜಯ್ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

 

ಇನ್ನು ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಬೋಲ ಶಂಕರ್, ಗುರ್ತುಂದ ಸೀತಕಲಂ, ರಜನಿಕಾಂತ್ ಜೊತೆ ಜೈಲರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಶಾರುಖ್ ಮಹಾನ್ ದಿನಕ್ಕೆ ಸೇದೋ ಸಿಗರೇಟ್ ಎಷ್ಟು ಪ್ಯಾಕ್ ಗೊತ್ತಾ ?ಕ್ಯಾನ್ಸರ್ ಆತನನ್ನು ಬೆನ್ನು ಬಿದ್ದಿದ್ಯಾ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ