ಭಾನುವಾರ, 25 ಅಕ್ಟೋಬರ್ 2026
Trending

ಸ್ಯಾಂಡಲ್ ವುಡ್ ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ `ಗಂಡಸಿ ನಾಗರಾಜ್’ ನಿಧನ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ನಾಗರಾಜ್ ಅವರು ನಿನ್ನೆ ರಾತ್ರಿ 10.30 ರ ಸುಮಾರಿಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಕೋಟಿಗೋಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

Sponsored


ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದರಾಗಿದ್ದ ಗಂಡಸಿ ನಾಗರಾಜ್ ಅವರು, ಸರ್ವರ್ ಸೋಮಣ್ಣ, ಸೂಪರ್ ನನ್ ಮಗ, ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀ ಮಂಜುನಾಥ, ರಾಜಾಹುಲಿ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.