ಸೋಮವಾರ, 26 ಅಕ್ಟೋಬರ್ 2026
Trending

Gold: ಹೂಡಿಕೆದಾರರೇ ಹುಷಾರ್, ಚಿನ್ನದ ದರ ಕುಸಿತಕ್ಕೆ ಯುದ್ಧ ಕಾರಣವಲ್ಲ – ಇಲ್ಲಿದೆ ನೋಡಿ ಅಸಲಿಯತ್ತು

Gold: ಇರಾನ್ ಹಾಗೂ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಕಾರಣ ಚಿನ್ನದ ದರದಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿ ಇದೀಗ ಚಿನ್ನದ ದರ ನಿರಂತರವಾಗಿ ಕುಸಿಯುತ್ತಿದೆ. ಇದಕ್ಕೂ ಕೂಡ ಯುದ್ಧದ ಎಫೆಕ್ಟ್ ತಟ್ಟಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಚಿನ್ನದ ದರ ಕುಸಿತಕ್ಕೆ ಯುದ್ಧ ಕಾರಣವೇ ಅಲ್ಲ. ಅದರ ಅಸಲಿಯತ್ತೇ ಬೇರೆ ಇದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕು.

Sponsored

ಯಸ್, ಮಾರುಕಟ್ಟೆ ವಿಶ್ಲೇಷಕ ಆಡಮ್ ಕೊಬೈಸ್ಸಿ ಅವರ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, ಚಿನ್ನ ಮತ್ತು ಬೆಳ್ಳಿಯು ಮಾರುಕಟ್ಟೆಯಲ್ಲಿ ತನ್ನ ವಿಶ್ವಾಸವನ್ನು ಕಳೆದುಕೊಳ್ಳುವತ್ತ ಸಾಗುತ್ತಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ವಿಶೇಷವಾಗಿ ಇರಾನ್‌ನಂತಹ ದೇಶದೊಂದಿಗೆ ಸಂಘರ್ಷ ತೈಲದ ಬೆಲೆ ಏರಿಕೆಗೂ ಮತ್ತು ಚಿನ್ನದಂತಹ ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆ ಹೆಚ್ಚಾಗುವಿಕೆಗೆ ಕಾರಣವಾಗುತ್ತವೆ. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಸಾಂಪ್ರದಾಯಿಕ ಧೋರಣೆಗೆ ವಿರುದ್ಧವಾಗಿ ನಡೆಯುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಚಿನ್ನದ ದರ ಕುಸಿತಕ್ಕೆ ನಿಜ ಕಾರಣ:

ಚಿನ್ನದ ದರ ನಿಜವಾಗಲೂ ಕುಸಿಯುತ್ತಿರುವುದಕ್ಕೆ ಮೂರು ಕಾರಣಗಳನ್ನು ನೀಡಬಹುದಾಗಿದೆ. ಮುಖ್ಯವಾಗಿ ಈ ಮೂರು ಅಂಶಗಳ ಮೇಲೇ ಚಿನ್ನದ ಬೆಲೆ ನಿಗದಿಯಾಗುತ್ತದೆ.

ಬಾಂಡ್ ಮಾರುಕಟ್ಟೆಯ ಚಲನೆ:

ಚಿನ್ನದ ದಿನದಿಂದ ದಿನಕ್ಕೆ ಗಣನೀಯವಾಗಿ ಕುಸಿಯುತ್ತಿರಲು ಕಾರಣವೆಂದರೆ ಬಾಂಡ್ ಮಾರುಕಟ್ಟೆಯ ತೀವ್ರ ಚಲನೆ. ಅಮೆರಿಕದ 10 ವರ್ಷದ ಖಜಾನೆ ಬಾಂಡ್‌ಗಳ ಇಳುವರಿ ಕೆಲವೇ ವಾರಗಳಲ್ಲಿ ಸುಮಾರು 4.4% ಮಟ್ಟಕ್ಕೆ ಏರಿಕೆಯಾಗಿದೆ. ಇದು ಹೂಡಿಕೆದಾರರ ಮನೋಭಾವದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಏಕೆಂದರೆ ಚಿನ್ನವು ಯಾವುದೇ ಬಡ್ಡಿದರ ನೀಡದ ಆಸ್ತಿಯಾಗಿರುವುದರಿಂದ, ಹೆಚ್ಚುತ್ತಿರುವ ಬಡ್ಡಿದರಗಳ ಸಮಯದಲ್ಲಿ ಬಾಂಡ್‌ಗಳು ಹೆಚ್ಚು ಆಕರ್ಷಕವಾಗುತ್ತವೆ. ಇದರ ಪರಿಣಾಮವಾಗಿ, ಹೂಡಿಕೆದಾರರು ಚಿನ್ನದಿಂದ ಹಣವನ್ನು ಹೊರತೆಗೆದು ಬಾಂಡ್‌ಗಳಿಗೆ ವರ್ಗಾಯಿಸುತ್ತಿದ್ದಾರೆ. 

ಅಮೆರಿಕಾ ಡಾಲರ್:

ಅಮೆರಿಕನ್ ಡಾಲರ್ ಬಲಿಷ್ಠವಾಗುತ್ತಿರುವುದು ಚಿನ್ನದ ಮೇಲೆ ಮತ್ತೊಂದು ಹೊಡೆತ ನೀಡಿದೆ. ಜಾಗತಿಕ ಅನಿಶ್ಚಿತತೆಯ ಸಂದರ್ಭಗಳಲ್ಲಿ ಡಾಲರ್ ಮತ್ತೆ ಸುರಕ್ಷಿತ ಆಶ್ರಯದ ಸ್ಥಾನವನ್ನು ಪಡೆದುಕೊಂಡಿದೆ. ಬಲವಾದ ಡಾಲರ್‌ನ ಪರಿಣಾಮವಾಗಿ ಡಾಲರ್‌ನಲ್ಲಿ ಬೆಲೆ ನಿಗದಿಯಾಗುವ ಚಿನ್ನದ ಬೆಲೆಗಳು ಸಹಜವಾಗಿಯೇ ಕುಸಿಯುತ್ತವೆ. 

ಮಾರುಕಟ್ಟೆಯ ಆಂತರಿಕ ವ್ಯವಸ್ಥೆ:

ಮಾರುಕಟ್ಟೆಯ “ಮೈಕ್ರೋಸ್ಟ್ರಕ್ಚರ್” ಅಥವಾ ಆಂತರಿಕ ವ್ಯವಸ್ಥೆ. ಕಳೆದ ಕೆಲವು ತಿಂಗಳಲ್ಲಿ ಚಿನ್ನ ಮತ್ತು ವಿಶೇಷವಾಗಿ ಬೆಳ್ಳಿಯ ಬೆಲೆಗಳು ಪ್ಯಾರಾಬೋಲಿಕ್ ಏರಿಕೆ ಕಂಡಿದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಲಿವರೆಜ್‌ಡ್ ಹೂಡಿಕೆಗಳು (ಫ್ಯೂಚರ್ಸ್, ಆಪ್ಷನ್‌ಗಳು) ಮಾರುಕಟ್ಟೆಯಲ್ಲಿ ಜಮಾಯಿಸಿದ್ದವು. ಬೆಲೆಗಳು ಕುಸಿಯಲು ಆರಂಭವಾದಾಗ, ಸ್ಟಾಪ್-ಲಾಸ್ ಆರ್ಡರ್‌ಗಳು ಸಕ್ರಿಯಗೊಂಡು, ಮಾರ್ಜಿನ್ ಕಾಲ್‌ಗಳು ಹೆಚ್ಚಾಗಿ, ಬಲವಂತದ ಮಾರಾಟ ಆರಂಭವಾಯಿತು. ಇದರಿಂದ ದ್ರವ್ಯತೆ ಕೊರತೆಯ ಪರಿಸ್ಥಿತಿ ಉಂಟಾಗಿ, ಬೆಲೆಗಳು ಕ್ಷಣ ಮಾತ್ರದಲ್ಲಿ ಕುಸಿಯತೊಡಗಿದವು