ಸೋಮವಾರ, 26 ಅಕ್ಟೋಬರ್ 2026
Trending

Hotel Bill: ಊಟ, ತಿಂಡಿಯ ಜೊತೆಗೆ ಗ್ಯಾಸ್ ಶುಲ್ಕ ವಿಧಿಸುತ್ತಿರುವ ಹೋಟೆಲ್ ಗಳು – ಬಿಲ್ ವೈರಲ್!!

Advertisement

Hotel Bill : ಕೊಲ್ಲಿ ದೇಶಗಳಲ್ಲಿ ಕವಿದಿರುವ ಯುದ್ಧದ ಕಾರ್ಮೋಡದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಬೆಲೆ ದುಬಾರಿ ಆಗುವುದರ ಜೊತೆಗೆ ಅವುಗಳ ಅಭಾವ ಎದುರಾಗಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇದರಿಂದಾಗಿ ಹೋಟೆಲ್ಗಳನ್ನು ಮುಚ್ಚುವ ಸಂಭವ ಎದುರಾಗಿದೆ. ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ರೆಸ್ಟೋರೆಂಟ್‌ವೊಂದರಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದವರಿಗೆ ಗ್ಯಾಸ್‌ ಶುಲ್ಕ ಸೇರಿಸಿ ಬಿಲ್‌ ನೀಡಲಾಗಿದೆ.

Sponsored

ಹೌದು, ಗ್ರಾಹಕರೊಬ್ಬರು ರೆಸ್ಟೋರೆಂಟ್‌ಗೆ ತಿಂಡಿಗೆಂದು ಹೋಗಿದ್ದು, ಅವರು ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ವಿಚಿತ್ರ ಎಂಬಂತೆ ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ. ಇದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಬಿಲ್‌ ಚೆನ್ನೈನ ತಿರುವೆಂಕಡನಗರ್, ಎಂ.ಜಿ.ಆರ್. ಸಾಲೈ ಪೆರುಂಗುಡಿಯ “ಗ್ರೀರಾಸ್‌ ರೆಸ್ಟೋರೆಂಟ್‌”ಗೆ ಸೇರಿದ್ದಾಗಿದೆ. ಇದರಲ್ಲಿ ದಿನಾಂಕ 12/03/2026, ಸಮಯ 08:32 ಅಂತಾ ಇದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

Advertisement
Advertisement

 ಹೋಟೆಲ್ ನೀಡಿದ ಬಿಲ್ :

* ಒಂದು ಇಡ್ಲಿ – 33.33 ರೂಪಾಯಿ

* ಒಂದು ವಡೆ – 33.33 ರೂಪಾಯಿ

* ಗ್ಯಾಸ್ (Gas) – 9.52 ರೂಪಾಯಿ

* CGST – 1.90 ರೂಪಾಯಿ

* SGST – 1.90 ರೂಪಾಯಿ

* ಒಟ್ಟು – 80 ರೂಪಾಯಿಯ ಬಿಲ್ ಇದಾಗಿದೆ.

Advertisement
div class="ere-sticky">