Financial Rules: ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳು ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ, ಕೆಲವೊಮ್ಮೆ ಹಳೆಯ ನಿಯಮಗಳನ್ನು ನವೀಕರಿಸಲಾಗುತ್ತದೆ.
Sponsoredಈ ಬಾರಿ, ಸೆಪ್ಟೆಂಬರ್ 1, 2025 ರಿಂದ ಹಣಕಾಸು (Financial Rules)ವ್ಯವಹಾರ ದಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ:
ಸೆಪ್ಟೆಂಬರ್ 1 ರಿಂದ, ಡಿಜಿಟಲ್ ಗೇಮಿಂಗ್ ಪ್ಲಾಟ್ಫಾರ್ಮ್ಗಳು, ಕೆಲವು ವ್ಯಾಪಾರಿಗಳು ಮತ್ತು ಸರ್ಕಾರಿ ವಹಿವಾಟುಗಳಿಗೆ ಮಾಡಿದ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್ಗಳನ್ನು ನೀಡಲಾಗುವುದಿಲ್ಲ.
ಬೆಳ್ಳಿ ಆಭರಣ ಹಾಲ್ಮಾರ್ಕ್
ಬೆಳ್ಳಿ ಆಭರಣಗಳ ಶುದ್ಧತೆ ಕುರಿತು, ಸೆಪ್ಟೆಂಬರ್ 1 ರಿಂದ ಬೆಳ್ಳಿ ಆಭರಣಗಳಿಗೆ ಹಾಲ್ಮಾರ್ಕ್ ನಿಯಮ ಜಾರಿಯಾಗಬಹುದು.
ಎಲ್ಪಿಜಿ, ಸಿಎನ್ಜಿ, ಪಿಎನ್ಜಿ ದರ ಬದಲಾವಣೆ:
ಪ್ರತಿ ತಿಂಗಳ ಆರಂಭದಲ್ಲಿ ಎಲ್ಪಿಜಿ ಸಿಲಿಂಡರ್ ದರಗಳು ಬದಲಾಗುತ್ತವೆ. ಸೆಪ್ಟೆಂಬರ್ 1 ರಂದು ಮತ್ತೆ ದರ ಬದಲಾವಣೆಯಾಗಬಹುದು.ಇದಲ್ಲದೆ, ಸಿಎನ್ಜಿ ಮತ್ತು ಪಿಎನ್ಜಿ ದರಗಳಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ.
ಅಂಚೆ ಸೇವೆ ಬದಲಾವಣೆ: ಸೆಪ್ಟೆಂಬರ್ 1 ರಿಂದ ನೀವು ಕಳುಹಿಸುವ ಎಲ್ಲಾ ಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಲಾಗುತ್ತದೆ. ಪ್ರತ್ಯೇಕ ಸೇವೆಯಾಗಿ ರಿಜಿಸ್ಟರ್ ಪೋಸ್ಟ್ ಇನ್ನು ಮುಂದೆ ಇರುವುದಿಲ್ಲ.




