ಒಂದು ಸ್ಮಾರ್ಟ್ ಫೋನಿನಿಂದಾಗಿ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡ ಬ್ರೆಜಿಲ್ ನಾಯಕ!
ಬ್ರಾಸಿಲಿಯಾ: ಮೊದಲ ಸುತ್ತಿನಲ್ಲಿ ಸೋತಿದ್ದ ಹಾಲಿ ಅಧ್ಯಕ್ಷ ಲುಲಾ ಡಿಸಿಲ್ವಾ 2ನೇ ಸುತ್ತಿನಲ್ಲಿ ಅಗತ್ಯ ಮತ ಪಡೆದು ಬ್ರಝಿಲ್ ಅಧ್ಯಕ್ಷರಾಗಿ ಗೆಲುವು ಕಂಡಿದ್ದು ಈ ಗೆಲುವಿಗೆ ಮುಖ್ಯ ಕಾರಣ- ಜೆನ್ ಜಿ ಗಳು ಎನ್ನಲಾಗಿದೆ.
Sponsoredಲುಲಾರನ್ನು 4ನೇ ಬಾರಿಗೆ ವಿಜಯಶಾಲಿಯನ್ನಾಗಿ ಮಾಡಿದ್ದಾರೆ ಹೊಸ ತಲೆಮಾರಿನ ಮತದಾರರು.
ಬ್ರೆಜಿಲ್ ಅಧ್ಯಕ್ಷರಾದ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ವೈಯಕ್ತಿಕ ಮೊಬೈಲ್ ಫೋನ್ ಅಥವಾ ಸ್ಮಾರ್ಟ್‌ಫೋನ್ ಬಳಸುತ್ತಿರಲಿಲ್ಲ.
“ನನಗೆ ಇತರ ಕೆಲಸಗಳನ್ನು ಮಾಡಲು ಕೈಗಳು ಬೇಕು ಮತ್ತು ನನಗೆ ಅಗತ್ಯವಿರುವ ವಿಷಯಗಳನ್ನು ಮಾತ್ರ ಹೇಳಲು ಇಷ್ಟಪಡುತ್ತೇನೆ” ಎಂಬುದು ಅವರ ನಿಲುವಾಗಿತ್ತು. ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತಿದ್ದರು. ಅವರು ಡಿಜಿಟಲ್ ಯುಗದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಕ್ರಿಯತೆ ತೋರದೆ, ಸಾಂಪ್ರದಾಯಿಕ ರಾಜಕೀಯ ಸಂಪರ್ಕ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು.
ಆದರೆ ಇತ್ತೀಚೆಗೆ ಮೊದಲ ಸುತ್ತಿನಲ್ಲಿ ಸೋಲು ಕಾಣುತ್ತಿದ್ದಂತೆ ಲುಲಾ ಹೊಸ ಸ್ಮಾರ್ಟ್ ಫೋನ್ ಕೊಂಡರು. 80 ವರ್ಷ ವಯಸ್ಸಿನ ಲುಲಾ ಡಾ ಸಿಲ್ವಾ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಮತ್ತು ಸಾರ್ವಜನಿಕರನ್ನು ತಲುಪಲು ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಖರೀದಿಸಿ, ಇನ್‌ಸ್ಟಾಗ್ರಾಮ್ ಮತ್ತು ಸೆಲ್ಫಿಗಳನ್ನು ಕಲಿಯಲು ಆರಂಭಿಸಿದ್ದಾರೆ. ಜತೆಗೆ, ಲುಲಾ ಆರ್ಮಿ, ವಾಟ್ಸಾಪ್ ಚಾನೆಲ್ ಮೂಲಕ ವ್ಯಾಪಕ ಪ್ರಚಾರ ಮಾಡಲಾಯಿತು. 3 ವಾರದಲ್ಲಿ 60 ಸಾವಿರ ಫಾಲೋವರ್ಸ್‌ರಿಂದ 1.1 ಕೋಟಿವರೆಗೂ ತಲುಪಿತು.
ಅವರ ಪಕ್ಷದ ಕಾರ್ಯಕರ್ತರು ಬೀದಿ ಬೀದಿ ಸಂಚರಿಸಿ ಲುಲಾ ಪರ ಮತಯಾಚನೆ ಮಾಡಿದರು. ಸ್ವತಃ ಲುಲಾ ಕೂಡ ಮೊದಲ ಬಾರಿಗೆ ಸೆಲ್‌ಫೋನ್ ಖರೀದಿಸಿ ಜೆನ್ ಜಿಗಳನ್ನು ಸೆಳೆಯಲು ಮುಂದಾದರು. ಕೊನೆಗೆ ಅವರು ಕಿಂಗ್ ಆಫ್ ಸೆಲ್ಫಿ ಎನಿಸಿಕೊಂಡರು. ಈಗ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ವಿಜಯಿಯಾಗಿದ್ದಾರೆ. ಒಂದು ಸ್ಮಾರ್ಟ್ ಫೋನ್ ನಿಂದಾಗಿ ಈ ವಿಜಯ ಎಂದು ವ್ಯಾಖ್ಯಾನಿಸಲಾಗುತ್ತಿದೆ.




