ಭಾನುವಾರ, 25 ಅಕ್ಟೋಬರ್ 2026
Trending

ಗಾಂಧಿ ಜಯಂತಿ ಆಚರಣೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು, ನಿಟ್ಟಡೆ–ವೇಣೂರು

ಗಾಂಧಿ ಜಯಂತಿ ಆಚರಣೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು, ನಿಟ್ಟಡೆ–ವೇಣೂರು ಇಲ್ಲಿ ದಿನಾಂಕ *02-10-2026* ರಂದು ಸಂಸ್ಥಾಪಕರಾದ *ಶ್ರೀ ಗಿರೀಶ್ ಕೆ.ಹೆಚ್.* ಅವರ ಮಾರ್ಗದರ್ಶನದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಗಾಂಧಿ ಜಯಂತಿಯ ದಿನದ ಮಹತ್ವದ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕಿಯಾದ *ಶ್ರೀಮತಿ ಸುಪ್ರಿತಾ* ಅವರು ಮಾಹಿತಿ ನೀಡಿದರು. ಸಂಸ್ಥೆಯ ಸಂಚಾಲಕರಾದ *ಶ್ರೀ ಅಶ್ವಿತ್ ಕುಲಾಲ್* ಅವರು ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ಹಾಗೂ ಆದರ್ಶಗಳನ್ನು ಶಿಕ್ಷಕರಿಗೆ ಪರಿಚಯಿಸಿದರು.

Sponsored

ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ನಾಯ್ಕ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮಮತಾ ಶಾಂತಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶುಭ ನಿತೇಶ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೋಭಾ ಎಲ್.ಎನ್. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಣಿತ ಉಪನ್ಯಾಸಕರಾದ ಶ್ರೀ ಚಿಟ್ಟೆಸಾಬ್ ಅವರು ನಿರ್ವಹಿಸಿದರು.