ಭಾನುವಾರ, 25 ಅಕ್ಟೋಬರ್ 2026

ಇನ್ಮುಂದೆ ಮೊಬೈಲ್ ನಲ್ಲೇ ಮಾಡ್ಬೋದು ರೇಷನ್ ಕಾರ್ಡ್ ಇ-ಕೆವೈಸಿ, ಜಸ್ಟ್ ಹೀಗೆ ಮಾಡಿ

ಪಡಿತರ ಚೀಟಿದಾರರಿಗೆ ಮೊಬೈಲ್ ನಲ್ಲಿ ಇ-ಕೆವೈಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

Sponsored

ವಿಕಾಸಸೌಧದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಬಳಿಕ ಮಾತನಾಡಿ, ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಒತ್ತಡ ಕಡಿಮೆ ಮಾಡಲು ಮೊಬೈಲ್ ಮೂಲಕವೇ ಮುಖಚರ್ಯೆ ಬಳಸಿ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯ ವಾರದಲ್ಲೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

Marriage AdMarriage AdSponsored

ಮೊಬೈಲ್ ಮೂಲಕ ಮಾಡುವ ವಿಧಾನ:

‘ಮೇರಾ ರೇಷನ್’ (Mera Ration) ಅಥವಾ ಸಂಬಂಧಿತ ಆಪ್ ಹಾಗೂ ಆಧಾರ್ ಫೇಸ್ ಆರ್ ಡಿ (Aadhaar FaceRD) ಮೊಬೈಲ್ ಅಪ್ಲಿಕೇಶನ್ ಬಳಸಿ ಮುಖದ ಗುರುತು (Facial Recognition) ಅಥವಾ ಒಟಿಪಿ (OTP) ಮೂಲಕ ಮನೆಯಲ್ಲೇ ಇ-ಕೆವೈಸಿ ಮಾಡಿಕೊಳ್ಳಬಹುದು.

ಆಫ್‌ಲೈನ್ ಸೌಲಭ್ಯ: ಮೊಬೈಲ್ ಮೂಲಕ ಮಾಡಲು ತೊಂದರೆಯಾದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿ (Ration Shop) ಅಥವಾ ಗ್ರಾಮ ಒನ್ / ಸಿಎಸ್‌ಸಿ (CSC) ಕೇಂದ್ರಗಳಿಗೆ ಭೇಟಿ ನೀಡಿ ಬೆರಳಚ್ಚು (Biometric) ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳಬಹುದು.