Rashmika Mandanna: ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾಗೆ ಸಂಭಾವನೆ ಎಷ್ಟು ಗೊತ್ತೇ? ಸಕ್ಸಸ್ ಮೆಟ್ಟಿಲೇರುತ್ತಿರುವ ರಶ್ಮಿಕಾ ಡಿಮ್ಯಾಂಡ್ ಊಹಿಸಲು ಸಾಧ್ಯವಿಲ್ಲ!

Rashmika Mandanna: ನ್ಯಾಷನಲ್ ಕ್ರಶ್ ಆಗಿ ಕ್ರೇಜ್ ಹುಟ್ಟಿಸಿರುವ ಕನ್ನಡದ ನಟಿ ರಶ್ಮಿಕ ಮಂದಣ್ಣ ಕಳೆದ ಕೆಲವು ವರ್ಷಗಳಿಂದ ಸಕ್ಸಸ್ ಮೇಲೆ ಸಕ್ಸಸ್ ಮೆಟ್ಟಿಲು ಏರುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಜೊತೆಗೆ ಟಾಲಿವುಡ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈಕೆ ನಟ ಸಲ್ಮಾನ್ ಖಾನ್ ಜೊತೆ ನಟಿಸುವ ಅದ್ಭುತ ಅವಕಾಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಸ್ನೇಹಿತನೊಂದಿಗೆ ‘ಪತ್ನಿ ವಿನಿಮಯ’ ಕ್ಕೆ ಮುಂದಾದ ಪತಿ!ತಿರಸ್ಕರಿಸಿದ ಪತ್ನಿಗೆ ಮಾಡಿದ್ದೇನು ಗೊತ್ತಾ? 


ಸದ್ಯ ಎ.ಆರ್ ಮುರುಗದಾಸ್ ನಿರ್ದೇಶನದ, ಸಿಕಂದ‌ರ್ (Sikandar)ಸಿನಿಮಾ ಈಗಾಗಲೇ ಚಿತ್ರೀಕರಣವನ್ನು ಪ್ರಾರಂಭಿಸಿದದ್ದು, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮುಖ್ಯ ಪಾತ್ರ ವಹಿಸಲಿದ್ದು, ಈದ್ 2025 ರಂದು ತೆರೆಗೆ ಬರಲು ಸಿದ್ಧವಾಗಿದೆ. ‘ಸಿಖಂದರ್’ ಸಿನಿಮಾ ಘೋಷಣೆಯ ನಂತರ ರಶ್ಮಿಕಾ ಮಂದಣ್ಣ (Rashmika Mandanna) ಸಂಭಾವನೆ ಕುರಿತು ಭಾರೀ ಚರ್ಚೆ ಶುರುವಾಗಿದ್ದು, ಈ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಇದೆ. ಹೌದು, ಸಿಕಂದ‌ರ್ ಜೊತೆಗೆ, ರಶ್ಮಿಕಾ ಮಂದಣ್ಣ ಹಲವಾರು ಪ್ರಾಜೆಕ್ಟ್’ಗಳಿಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್‌ ಮುಂದಿನ ವರ್ಷದಿಂದ ರದ್ಧತಿ; ಸಿಎಂ ಸಿದ್ದರಾಮಯ್ಯ ಸೂಚನೆ

Leave A Reply

Your email address will not be published.