ಭಾನುವಾರ, 25 ಅಕ್ಟೋಬರ್ 2026
Trending

Death Prediction: ಈ ಡೆತ್ ಕ್ಯಾಲ್ಕುಲೇಟರ್ ನಿಮ್ಮ ಸಾಯುವ ದಿನಾಂಕ ಮತ್ತು ಸಮಯವನ್ನು ಹೇಳುತ್ತೆ

Death Prediction: ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ 'ಡೆತ್ ಕ್ಯಾಲ್ಕುಲೇಟರ್' ಅನ್ನು ಸಿದ್ಧಪಡಿಸಿದೆ.

Death Prediction
Image Credit Source: OECD

Death Prediction: ಹುಟ್ಟು ಎಂಬುವುದು ಇರುವುದಾದರೆ ಸಾವು ಕೂಡಾ ಇದೆ. ಯಾವುದೇ ವ್ಯಕ್ತಿಯ ಸಾವಿನ ಬಗ್ಗೆ ಹೇಳಲು ಸಾಧ್ಯವಿಲ್ಲ. ಬದಲಾಗುತ್ತಿರುವ ತಂತ್ರಜ್ಞಾನದಿಂದ, ಅಸಾಧ್ಯವೆಂದು ತೋರುತ್ತಿದ್ದ ಅನೇಕ ವಿಷಯಗಳು ಸಾಧ್ಯವಾಗಲು ಪ್ರಾರಂಭಿಸಿವೆ. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ AI ಯುಗ ನಡೆಯುತ್ತಿದೆ. ಅದರ ನವೀಕರಣಗಳ ಜೊತೆಗೆ, ಮಾನವರ ಪ್ರಪಂಚವೂ ವೇಗವಾಗಿ ಬದಲಾಗುತ್ತಿದೆ. ಈಗ AI ಮೂಲಕ ಜನರ ಸಾವಿನ ದಿನಾಂಕ ಮತ್ತು ಸಮಯದ ಮುನ್ಸೂಚನೆಯನ್ನು ಕಂಡುಹಿಡಿಯಲಾಗುತ್ತಿದೆ.

Sponsored

ಮನುಷ್ಯನಿಗೆ ತಾನು ಹೇಗೆ ಮತ್ತು ಯಾವಾಗ ಸಾಯುತ್ತೇನೆ ಎಂಬ ಕುತೂಹಲ ಇದ್ದೇ ಇರುತ್ತದೆ. ಜನರು ಸಹ ಅದರ ಉತ್ತರಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಆದರೆ ಅವರಿಗೆ ನಿಖರವಾದ ಉತ್ತರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನೀವು ಯಾವಾಗ ಸಾಯಬಹುದು ಎಂಬುದನ್ನು ಕಂಡುಹಿಡಿಯಲು ಯುರೋಪಿಯನ್ ದೇಶ ಡೆನ್ಮಾರ್ಕ್‌ನ ವಿಜ್ಞಾನಿಗಳು AI ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ‘ಡೆತ್ ಕ್ಯಾಲ್ಕುಲೇಟರ್’ ಅನ್ನು ಸಿದ್ಧಪಡಿಸಿದೆ. ಈ ಸಾವಿನ ಮುನ್ಸೂಚಕದ ಬಗ್ಗೆ ಇದು ವ್ಯಕ್ತಿಯ ಜೀವನದ ಅವಧಿಯನ್ನು ಅತ್ಯಂತ ನಿಖರತೆಯಿಂದ ಹೇಳಬಲ್ಲದು ಎಂದು ಹೇಳಲಾಗಿದೆ. ಇದು ಚಾಟ್‌ಜಿಪಿಟಿಯಂತೆಯೇ ಅದೇ ಅಲ್ಗಾರಿದಮ್ ಮತ್ತು ಡೇಟಾದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯದ (ಡಿಟಿಯು) ಪ್ರೊಫೆಸರ್ ಸುನೆ ಲೆಹ್ಮನ್ ಈ ಕುರಿತು ಸುದ್ದಿ ಸಂಸ್ಥೆ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. 2008 ರಿಂದ 2020 ರವರೆಗಿನ 60 ಲಕ್ಷ ಜನರಿಗೆ ಸಂಬಂಧಿಸಿದ ಆರೋಗ್ಯ ಮತ್ತು ಕಾರ್ಮಿಕ ಮಾರುಕಟ್ಟೆಯ ಡೇಟಾವನ್ನು ಪರೀಕ್ಷೆಗಾಗಿ ವಿಶ್ಲೇಷಿಸಲಾಗಿದೆ ಎಂದು ಅವರು ಹೇಳಿದರು. ಇದರ ಮೂಲಕ, ದಿನಾಂಕ ಮುನ್ಸೂಚಕವು 78 ಪ್ರತಿಶತ ನಿಖರತೆಯೊಂದಿಗೆ ಸರಿಯಾದ ಡೇಟಾವನ್ನು ತೋರಿಸಿದೆ.

ನಾವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಘಟನೆಗಳನ್ನು ಅನುಕ್ರಮಗೊಳಿಸಿದ್ದೇವೆ ಮತ್ತು ಅವುಗಳನ್ನು ವಿಶ್ಲೇಷಿಸಲು ChatGPT ಹಿಂದಿನ ತಂತ್ರಜ್ಞಾನವನ್ನು ಬಳಸಿದ್ದೇವೆ ಇದು ಏನನ್ನೂ ಊಹಿಸಬಲ್ಲದು ಎಂಬುವುದರ ಕುರಿತು ಲೆಹ್ಮನ್ ವಿವರಿಸಿದ್ದಾರೆ.

ಇದನ್ನೂ ಓದಿ: ಪುತ್ತೂರಿನ 9 ಮಾದರಿ ಮತಗಟ್ಟೆಗಳು ವರ್ಣಮಯ;ಚಿತ್ರಕಲಾ ಶಿಕ್ಷಕರ ಕೈಚಳಕದಿಂದ ಕಂಗೊಳಿಸಲಿದೆ ಮಾದರಿ ಮತಗಟ್ಟೆಗಳು