Delhi Crime: ದೆಹಲಿಯಲ್ಲಿ ಯುವತಿ ಮೇಲೆ ಯುವಕನಿಂದ ಚಾಕುವಿನಿಂದ ಹಲ್ಲೆ

ತನ್ನನ್ನು ಗೇಲಿ ಮಾಡಿದ್ದಕ್ಕೆ ಆಕ್ರೋಶಗೊಂಡು ಚಾಕು ತಿವಿತ

Delhi Crime: ದೆಹಲಿಯ ಮುಖರ್ಜಿ ನಗರದಲ್ಲಿ ಹಾಡಹಗಲೇ ಭಯಾನಕ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಲ್ಲೊಬ್ಬ ಯುವಕ ಯುವತಿಯೋರ್ವಳಿಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಯುವಕನೊಬ್ಬ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಮುಖರ್ಜಿ ನಗರದ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ಯುವತಿಗೆ ಗಂಭೀರ ಗಾಯಗಳಾಗಿಲ್ಲ, ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಮಾರ್ಚ್ 22 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಾಹಿತಿ ಪ್ರಕಾರ ವಿಡಿಯೋದಲ್ಲಿ ಕಾಣಿಸಿರುವ ಯುವಕನ ಹೆಸರು ಅಮನ್ (22). ಹಗಲು ಹೊತ್ತಿನಲ್ಲಿ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾರಿಹೋಕರು ಮಧ್ಯ ಪ್ರವೇಶಿಸಿ ಆರೋಪಿಗಳನ್ನು ತಡೆದು ಬಂಧಿಸಲು ಯತ್ನಿಸಿದರು. ಈ ದಾಳಿಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿಲ್ಲ ಮತ್ತು ಅಪಾಯದಿಂದ ಪಾರಾಗಿದ್ದಾಳೆ. ಘಟನೆಯ ವೀಡಿಯೋ ಈ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಇತ್ತ ಗಮನಿಸಿ; ಮುಂಬರುವ ಶೈಕ್ಷಣಿಕ ವರ್ಷದಿಂದ 3, 6 ನೇ ತರಗತಿ ಮಕ್ಕಳಿಗೆ ಹೊಸ ಪಠ್ಯಕ್ರಮ

ಈ ಯುವಕನನ್ನು ಮುಖರ್ಜಿ ನಗರದ ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದು, ಅಷ್ಟು ಮಾತ್ರವಲ್ಲೇ ಆ ಪ್ರದೇಶದಲ್ಲಿ ಓಡಾಡುತ್ತಿದ್ದವರೆಲ್ಲ ಆತನನ್ನು ಹುಚ್ಚ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಜೊತೆಗೆ ಮುಖರ್ಜಿ ನಗರದ ಲೈಬ್ರರಿಯಲ್ಲಿ ಓದಲೆಂದು ಬಂದಿದ್ದ ಈ ಯುವತಿ ಕೂಡಾ ಗೇಲಿ ಮಾಡಿದ್ದು, ಆರೋಪಿ ಅಲ್ಲಿಯೇ ಇದ್ದ ತರಕಾರಿ ಅಂಗಡಿಗೆ ಹೋಗಿ ಚಾಕುವನ್ನು ತೆಗೆದುಕೊಂಡು ಬಂದು ಆಕೆಯ ಹೊಟ್ಟಿಗೆ ತಿವಿದಿದ್ದಾನೆ.

ಆರೋಪಿಯನ್ನು ಅಲ್ಲಿಗೆ ಬಂದವರು ಹಿಡಿಯಲು ಪ್ರಯತ್ನ ಮಾಡಿದರೂ ಆತ ತಪ್ಪಿಸಿಕೊಂಡಿದ್ದಾನೆ.

 

Leave A Reply

Your email address will not be published.