ಸೋಮವಾರ, 26 ಅಕ್ಟೋಬರ್ 2026
Trending

Aishwarya Rai salary: ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ, ಈಕೆಯ ಮುಂದೆ ರಶ್ಮಿಕಾ ಸಂಭಾವನೆ ಕೇವಲ ಅರ್ಧ !

ಅದ್ಭುತವಾಗಿ ನಟಿಸಿರುವ ಐಶ್ವರ್ಯಾ ರೈ ಅವರ ಈ ಸಿನಿಮಾದ ಸಂಭಾವನೆ ಎಷ್ಟಿರಬಹುದು? ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ.

Aishwarya Rai salary
Image source: glamsham

Aishwarya Rai salary: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಮದುವೆಯ ನಂತರ ಸಿನಿಮಾಗಳಿಗೆ ಬ್ರೇಕ್ ನೀಡಿದ್ದರು. ಸದ್ಯ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಇದೀಗ ‘ಪೊನ್ಶಿಯಿನ್ ಸೆಲ್ವನ್ 2’ (ponniyin selvan) ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪೊನ್ನಿನ್ ಸೆಲ್ವನ್ ಭಾಗ 2 ರಲ್ಲಿ ಐಶ್ವರ್ಯಾ ರೈ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಅವರು ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sponsored

ಮಣಿರತ್ನಂ (Mani Rathnam) ನಿರ್ದೇಶಿಸಿರುವ ಬಹುತಾರಾಗಣದ
ಬಿಗ್ ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ಏಪ್ರಿಲ್ 28 ರಂದು ಬಿಡುಗಡೆ ಆಗಿದೆ. ಇದು ಕಾದಂಬರಿ ಆಧರಿಸಿದ ಸಿನಿಮಾವಾಗಿದ್ದು, ಸಿನಿಮಾದಲ್ಲಿ ವಿಕ್ರಂ (Chiyaan Vikram), ಐಶ್ವರ್ಯಾ ರೈ (Aishwarya Rai), ಕಾರ್ತಿ, ತ್ರಿಷಾ (trisha), ಜಯಂ ರವಿ, ಐಶ್ವರ್ಯ ಲಕ್ಷಮಿ, ಶೋಭಿತಾ ಧುಲಿಪಾಲ, ನಾಸರ್, ಪ್ರಭು ಇನ್ನೂ ಹಲವು ತಾರಾ ನಟ-ನಟಿಯರು ನಟಿಸಿದ್ದಾರೆ. ಸಿನಿಮಾಗೆ ಏ.ಆರ್.ರೆಹಮಾನ್ ಸಂಗೀತ ನೀಡಿದ್ದು, ಈ ಸಿನಿಮಾ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೂಪರ್​ ಹಿಟ್​ ಆಗಿ, ಶತಕೋಟಿ ಕ್ಲಬ್​ ಸೇರಿದೆ.

Advertisement

ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ‘ನಂದಿನಿ’ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ. ಅವರ ನಟನೆಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತವಾಗಿ ನಟಿಸಿರುವ ಐಶ್ವರ್ಯಾ ರೈ ಅವರ ಈ ಸಿನಿಮಾದ ಸಂಭಾವನೆ (Aishwarya Rai Salary) ಎಷ್ಟಿರಬಹುದು?
ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ, ಈಕೆಯ ಮುಂದೆ ರಶ್ಮಿಕಾ (rashmika mandanna) ಸಂಭಾವನೆ ಕೇವಲ ಅರ್ಧ !

ಐಶ್ವರ್ಯಾ ರೈ ಈ ಸಿನಿಮಾದಲ್ಲಿ ನಟಿಸಲು 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಪೊನ್ನಿಯಿನ್ ಸೆಲ್ವನ್ 2 ನಲ್ಲಿ ವಿಕ್ರಮ್ 12 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ 50 ಕೋಟಿ ಗಳಿಸಿ ಮೂರನೇ ದಿನ 30 ಕೋಟಿ ಗಳಿಸಿದೆ. ಭಾರತದಲ್ಲಿ ಚಿತ್ರದ ಕಲೆಕ್ಷನ್ 80 ಕೋಟಿ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ ‘ಪೊನ್ನಿಯಿನ್ ಸೆಲ್ವನ್ 2’ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ನೂರು ಕೋಟಿ ಕ್ಲಬ್‌ ಸೇರಿದೆ.

ಇದನ್ನೂ ಓದಿ: ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಬಾಲಿವುಡ್ ಬ್ಯಾಡ್ ಬಾಯ್! ತಪ್ಪೆಲ್ಲ ನನ್ನದೇ ಎಂದ ಸಲ್ಲು ಹೇಳಿದ್ದೇನು?

Comments are closed.