ಶುಕ್ರವಾರ, 30 ಅಕ್ಟೋಬರ್ 2026
Trending

ಪುತ್ತೂರು: ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟು ಮಹಿಳೆ ದಾರುಣ ಸಾವು

Advertisement
Advertisement

ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗೆಸೆಯಲ್ಪಟ್ಟು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋರಿಯ ಎಂಬಲ್ಲಿ ಸಂಭವಿಸಿದೆ.

Sponsored

ಮೃತರನ್ನು ಬೆಳ್ಳಿಪ್ಪಾಡಿ ಅಳಿಮೆ ನಿವಾಸಿ ಸೇಸಪ್ಪ ಗೌಡ ಎಂಬವರ ಪತ್ನಿ ಗಿರಿಜಾ (62) ಎಂದು ಗುರುತಿಸಲಾಗಿದೆ.

Advertisement
Advertisement

ಗಿರಿಜಾ ಅವರು ತನ್ನ ಸಂಬಂಧಿಕ ದಿವಾಕರ ಎಂಬವರ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಕೋರಿಯ ಎಂಬಲ್ಲಿ ರಸ್ತೆ ಹಂಪ್‍ನಲ್ಲಿ ಬೈಕ್‍ನಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

Advertisement

ಘಟನೆಯ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement