ಸೋಮವಾರ, 26 ಅಕ್ಟೋಬರ್ 2026
Trending

ಡಿವೈಡರ್‌ಗೆ ಬೈಕ್ ಡಿಕ್ಕಿ : ಕೂರ್ನಡ್ಕದ ಆಶಿಕ್ ಸುನೈಫ್ ಮೃತ್ಯು

ಬೆಂಗಳೂರು: ದ್ವಿಚಕ್ರ ವಾಹನ ಡಿವೈಡರ್’ಗೆ ಡಿಕ್ಕಿಯಾಗಿ ಪುತ್ತೂರಿನ ಯುವಕರು ಗಾಯಗೊಂಡ ಘಟನೆ ಬೆಂಗಳೂರಿನ ರಾಮನಗರದ ಸಮೀಪದಲ್ಲಿ ನಡೆದಿದ್ದು, ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್(21) ಮಾ.24 ರಂದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Sponsored

ಸುನೈಫ್ ಪುತ್ತೂರಿನ ಬಸ್ ಸ್ಟಾಂಡ್ ಬಳಿ ಇರುವ ಬ್ಯಾಗ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತನ್ನ ಸ್ನೇಹಿತ ರವೂಫ್ ಜೊತೆ ಬೆಂಗಳೂರು ಕಡೆ ಹೊರಟಿದ್ದ. ಇನ್ನೇನು ಬೆಂಗಳೂರು ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಕ್ಟಿವಾ ಡಿವೈಡರ್‌’ಗೆ ಡಿಕ್ಕಿ ಹೊಡೆದಿತ್ತು.

Advertisement
Advertisement

ಅಪಘಾತದಿಂದಾಗಿ ಸುನೈಫ್ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೇ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

Advertisement