ಶನಿವಾರ, 24 ಅಕ್ಟೋಬರ್ 2026

ಬೆಳ್ತಂಗಡಿ: ಮೂಳೆ ತಜ್ಞ ಡೋಂಗ್ರೆ ಇದ್ದ ಕಾರು- ಜೀಪು ನಡುವೆ ಅಪಘಾತ !!

ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞ ಡೊಂಗ್ರೆ ಇವರು ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಜೀಪು ಡಿಕ್ಕಿ ಹೊಡೆದಿದೆ. ಈ ಘಟನೆಯು ಇದೀಗ ಗುರುವಾರ ಸಂಜೆ ನಡೆದಿದ್ದು ಘಟನೆಯು ಬೆಳ್ತಂಗಡಿಯ ಸಂತೆಕಟ್ಟೆ ಬಳಿ ನಡೆದಿದೆ.

ವೈದ್ಯರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ