ಭಾನುವಾರ, 25 ಅಕ್ಟೋಬರ್ 2026
Trending

Parliament Election: ಲೋಕಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

Parliament Election

ಲೋಕಸಭಾ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದು, ಇದೀಗ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 102 ಸಂಸದೀಯ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯ ಪ್ರಕಾರ , ನಾಮಪತ್ರ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿದೆ.

Sponsored

ಇದನ್ನೂ ಓದಿ: Soujanya Protest Putturu: ಪುತ್ತೂರಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆ; ಪುತ್ತಿಲ ಸೇರಿ ಐವರಿಗೆ ನೋಟಿಸ್‌

ಹಬ್ಬದ ಕಾರಣದಿಂದಾಗಿ , ಮೊದಲ ಹಂತದಲ್ಲಿ ಮತದಾನಕ್ಕೆ ಹೋಗುವ ಬಿಹಾರದ ಲೋಕಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ಬಿಹಾರದ 40 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 28ರಂದು ನಾಮನಿರ್ದೇಶನ ಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಬಿಹಾರಕ್ಕೆ , ಇದು ಮಾರ್ಚ್ 30 ರಂದು ನಡೆಯಲಿದೆ. ಇನ್ನು ತಮಿಳುನಾಡಿನ ಎಲ್ಲಾ 29 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: NPS New Rule: ಎನ್‌ಪಿಎಸ್‌ ಖಾತೆಗೆ ಲಾಗಿನ್‌ ಆಗುವ ನಿಯಮದಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮ ಯಾವಾಗದಿಂದ ಜಾರಿ? ಇಲ್ಲಿದೆ ಮಾಹಿತಿ

ನಾಮಪತ್ರ ಹಿಂಪಡೆಯಲು ಮಾರ್ಚ್ 20 ಕೊನೆಯ ದಿನವಾಗಿದ್ದರೆ , ಬಿಹಾರಕ್ಕೆ ಏಪ್ರಿಲ್ 2 ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿದೆ. 18ನೇ ಲೋಕಸಭೆಗೆ ಏಪ್ರಿಲ್ 19ರಂದು ಚುನಾವಣೆ ಆರಂಭವಾಗಲಿದ್ದು, ನಂತರದ ಹಂತಗಳಲ್ಲಿ ಏಪ್ರಿಲ್ 26 , ಮೇ 7 , ಮೇ 13 , ಮೇ 20 , ಮೇ 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದೆ. ಇನ್ನೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಈ ಕೆಳಗಿನ ರಾಜ್ಯಗಳಲ್ಲಿ ಮೊದಲನೇ ಹಂತದ ಚುನಾವಣೆ ನಡೆಯಲಿದೆ :

ಅರುಣಾಚಲ ಪ್ರದೇಶ , ಅಸ್ಸಾಂ , ಬಿಹಾರ , ಛತ್ತೀಸ್ಗಢ , ಮಧ್ಯಪ್ರದೇಶ , ಮಹಾರಾಷ್ಟ್ರ , ರಾಜಸ್ಥಾನ , ತಮಿಳುನಾಡು , ಉತ್ತರ ಪ್ರದೇಶ , ಪಶ್ಚಿಮ ಬಂಗಾಳ , ಜಮ್ಮು ಮತ್ತು ಕಾಶ್ಮೀರ , ಲಕ್ಷದ್ವೀಪ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.