Soujanya Protest Putturu: ಪುತ್ತೂರಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆ; ಪುತ್ತಿಲ ಸೇರಿ ಐವರಿಗೆ ನೋಟಿಸ್‌

Putturu Arun Kumar Puttila: ಸೌಜನ್ಯ ನ್ಯಾಯಕ್ಕಾಗಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ಜರುಗಿದ ಪ್ರತಿಭಟನೆಗೆ ಕೇಸ್‌ ದಾಖಲಾಗಿರುವ ಕುರಿತು ವರದಿಯಾಗಿದೆ. ಹಾಗೂ ಈ ಕುರಿತು ಅರುಣ್‌ ಕುಮಾರ್‌ ಪುತ್ತಿಲ ಸೇರಿ ಐವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಆಗಸ್ಟ್‌ 14, 2023 ರಂದು ಪುತ್ತೂರಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪುತ್ತಿಲ ಪರಿವಾರದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ದರ್ಬೆಯಿಂದ ಬಸ್‌ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥ ನಡೆದಿತ್ತು. ಹಾಗೂ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ಪ್ರಾರಂಭ ಮಾಡಲಾಗಿತ್ತು.

ಈ ಘಟನೆಯ ಕುರಿತು ಇದೀಗ ಅರುಣ್‌ಕುಮಾರ್‌ ಪುತ್ತಿಲ, ಪ್ರಸನ್ನ ಮಾರ್ತಾ, ಉಮೇಶ್‌ ಕೋಡಿಬೈಲು, ಅನಿಲ್‌ ತೆಂಕಿಲ ಇವರಿಗೆ ನೋಟಿಸ್‌ ಜಾರಿಯಾಗಿದೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

1 Comment
  1. […] ಇದನ್ನೂ ಓದಿ: Soujanya Protest Putturu: ಪುತ್ತೂರಿನಲ್ಲಿ ಸೌಜನ್ಯ ನ್ಯಾಯ… […]

Leave A Reply

Your email address will not be published.