ಸೋಮವಾರ, 26 ಅಕ್ಟೋಬರ್ 2026
Trending

Viral News : ನಡು ರಾತ್ರಿ ಸ್ಮಶಾನದಿಂದ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆ​ – ಗೇಟ್​ ಬಳಿ ಬರುತ್ತಿದ್ದಂತೆ ಡೆಲಿವರಿ ಬಾಯ್​ ಗೆ ಕಾದಿತ್ತು ಶಾಕ್

Viral News: ಹಗಲು-ರಾತ್ರಿ ಎನ್ನದೆ ಶ್ರಮಿಸುವ ಫುಡ್ ಡೆಲಿವರಿ ಮಾಡುವ ಯುವಕ, ಯುವತಿಯರ ಬದುಕು ಅಂದುಕೊಂಡಷ್ಟು ಸುಲಭವಲ್ಲ. ಆದರೆ, ಇಲ್ಲೊಬ್ಬ ಡೆಲಿವರಿ ಬಾಯ್‌ಗೆ ಎದುರಾದ ಅನುಭವ ಮಾತ್ರ ನಿಮಗೂ ಕೂಡ ಭಯ ಹುಟ್ಟಿಸುತ್ತೆ. 

Sponsored

ಹೌದು, ಇಲ್ಲೊಬ್ಬಳು ಮಹಿಳೆ ಸ್ಮಶಾನದಲ್ಲಿ ಕುಳಿತು ಬಿರಿಯಾನಿ ಆರ್ಡರ್ ಮಾಡಿದ್ದಾಳೆ. ಆರ್ಡರ್ ಮಾಡಿದ ಮಹಿಳೆಗೆ, ಊಟ ತಲುಪಿಸಲು ಆಕೆಯಿದ್ದ ಸ್ಥಳಕ್ಕೆ ಬಂದ ಡೆಲಿವರಿ ಬಾಯ್​ಗೆ ಆಗಿದ್ದು ಮಾತ್ರ ಭಯಾನಕ ಅನುಭವ. ಕಾರಣ, ಡೆಲಿವರಿಗೆ ಆತ ನಿಂತಿದ್ದು ಸ್ಮಶಾನದ ಗೇಟ್​ ಮುಂಭಾಗದಲ್ಲಿ. ಒಂದು ನಿಮಿಷ ಏನು ಮಾಡಬೇಕೆಂದು ತಿಳಿಯದೆ, ಭಯದಲ್ಲಿ ಒಳಗೆ ಹೋಗದ ಆತ, ಆರ್ಡರ್​ ಮಾಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಆಗ, ಆಕೆ ಆಡಿದ ಮಾತುಗಳನ್ನು ಕೇಳಿ ಡೆಲಿವರಿ ಬಾಯ್​ಗೆ ಬೆವರಿಳಿದಿದೆ.

ಇಬ್ಬರ ನಡುವಿನ ಸಂಭಾಷಣೆ ಏನು?

ಡೆಲಿವರಿ ಬಾಯ್​: ಮೇಡಂ, ನಾನು ಕೊಟ್ಟಿರುವ ಲೋಕೋಷನ್ ಅಲ್ಲಿದ್ದೀನಿ. ಈಗ ಎಲ್ಲಿಗೆ ಬರಬೇಕು?ಮಹಿಳೆ: ನೇರವಾಗಿ ಬನ್ನಿ, ಅಲ್ಲಿ ನಾಯಿಯೊಂದು ಕುಳಿತಿದೆ. ಕಾಣಿಸುತ್ತ? ಡೆಲಿವರಿ ಬಾಯ್​: ಮೇಡಂ, ಇದು ಸ್ಮಶಾನ. ಮಹಿಳೆ: ನಿಮಗೆ ನಾಯಿ ಕಾಣಿಸ್ತಾ? ಹಾಗೆ ನೇರವಾಗಿ ಸ್ಮಶಾನದ ಗೇಟ್ ಒಳಗೆ ಬನ್ನಿಡೆಲಿವರಿ ಬಾಯ್​: ನೀವು ಸ್ಮಶಾನದಿಂದ ಫುಡ್​ ಆರ್ಡರ್ ಮಾಡಿದ್ದೀರಾ? ನೀವೇ ಹೊರಬಂದು ತೆಗೆದುಕೊಳ್ಳಿ. ಇಲ್ಲವಾದ್ರೆ ಆರ್ಡರ್​ ಕ್ಯಾನ್ಸಲ್​ ಮಾಡ್ತೀನಿಮಹಿಳೆ: ಭಯಪಡಬೇಡಿ, ನಾನಿಲ್ಲೇ ಇದ್ದೀನಿ. ನಿಮಗೆ ದೆವ್ವಗಳು ಎಂದ್ರೆ ಭಯವೇ? ಎಂದು ನಗುತ್ತಾ ಕೇಳುತ್ತಾಳೆ. 

ಒಟ್ಟಿನಲ್ಲಿ ಸ್ಮಶಾನದಿಂದ ಮಾತನಾಡುತ್ತಿರುವ ಮಹಿಳೆಯ ಧ್ವನಿಯಲ್ಲಿ ಯಾವುದೇ ಭಯವಿಲ್ಲ ಹಾಗೂ ತುಂಬಾ ಶಾಂತವಾಗಿ ಮಾತನಾಡುತ್ತಿರುವುದು ಸದ್ಯ ಹಲವರನ್ನು ಬೆದರಿಸಿದೆ.

ಸಧ್ಯ ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ಕಂಡ ಕೆಲ ನೆಟ್ಟಿಗರು ಇದು ತಮಾಷೆಗಾಗಿ ಮಾಡಿರುವ ವಿಡಿಯೋ ಇದ್ದಿರಬಹುದು ಎಂದು ಹೇಳಿದರೆ, ಇನ್ನೂ ಕೆಲವರು ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಎಂದು ಹೇಳಿಕೊಂಡಿದ್ದಾರೆ . ಆದರೂ, ರಾತ್ರಿ ವೇಳೆ ಇಂತಹ ಜಾಗಗಳಿಗೆ ಡೆಲಿವರಿ ನೀಡಲು ಹೋಗುವವರ ಸುರಕ್ಷತೆಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

https://x.com/i/status/2017823246134219126