ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ನೋಂದಣಿ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಗೃಹ ಸಚಿವ ಪ್ರಿಯಾಂಕರ್ ಗೆ ಅವರು ಈ ಬಗ್ಗೆ ಸಾಕಷ್ಟು ಆರೋಪ ಮಾಡುತ್ತಿದ್ದಾರೆ. ಈ ನಡುವೆ ಇದೀಗ ಪೇಜಾವರ ಶ್ರೀಗಳು ಆರ್ ಎಸ್ ಎಸ್ ನೊಂದಣಿ ಮಾಡಿದರೆ ಯಾವ ಆರೋಪಗಳು ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಆರ್ ಎಸ್ ಎಸ್ ಕುರಿತು ಪ್ರಿಯಾಂಕ ಖರ್ಗೆ ಅವರು ಮಾಡುತ್ತಿರುವ ಖ್ಯಾತೆಯ ಬಗ್ಗೆ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶವಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಅಂದರೆ RSS ಅನ್ನು ನೋಂದಣಿ ಮಾಡುವುದೇ ಒಳಿತು, ಮಾಡದೆ ಇದ್ದರೆ ಸಮಸ್ಯೆಗಳು, ಆರೋಪಗಳು ಎದುರಾಗುತ್ತವೆ ಎಂಬುವ ರೀತಿಯಲ್ಲಿ ಶ್ರೀಗಳು ಹೇಳಿಕೆ ನೀಡಿದಂತಿದೆ.



