ಕ್ಯಾನ್ಸರ್ನಿಂದ ಮೃತಪಟ್ಟ ಮಾಜಿ ಆರ್ಎಸ್ಎಸ್(RSS) ಕಾರ್ಯಕರ್ತ ನಾರಾಯಣ ತೊಟ್ಟತ್ತೋಡಿ (64) ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ನೆರವೇರಿಸಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಜೇಶ್ವರ ತಾಲ್ಲೂಕಿನ ಮೀಂಜ ಗ್ರಾಮ ಪಂಚಾಯತ್ನ ಚಿಗುರುಪಾದೆ ಮೂಲದ ದಿನಗೂಲಿ ಕಾರ್ಮಿಕ ನಾರಾಯಣನ್ ತೊಟ್ಟಥೋಡಿ (64) ಸಾವನ್ನಪ್ಪಿದ ಆರ್ ಎಸ್ ಎಸ್ ಮಾಜಿ ಕಾರ್ಯಕರ್ತ. ಅವರು ಗುರುವಾರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶುಕ್ರವಾರ ಅವರ ಸ್ವಗ್ರಾಮವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬ್ಲಾಕ್ನ ಮೀಂಜ ಪಂಚಾಯಿತಿಯ ಚಿಗ್ರುಪಾಡವು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ನಾರಾಯಣನ್ ಸುಮಾರು ಒಂದು ತಿಂಗಳ ಹಿಂದೆ ಚಿಗ್ರುಪಾಡವು ಗ್ರಾಮದ ಅಂಗಡಿಯೊಂದರ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ ಬಾಯಿಯ ಕ್ಯಾನ್ಸರ್ ಕೊನೆಯ ಹಂತದಲ್ಲಿತ್ತು. ಕುಟುಂಬದ ಸಮಸ್ಯೆಗಳಿಂದ ಅವರು ನಿರಾಶ್ರಿತರಾಗಿದ್ದರು. ವಯೋವೃದ್ಧ ಸಹೋದರಿಗೆ ಅವರನ್ನು ನೋಡಿಕೊಳ್ಳುವ ಸ್ಥಿತಿಯೂ ಇರಲಿಲ್ಲ. ನಾರಾಯಣ ಅವರು ದಿನಗೂಲಿ ಕಾರ್ಮಿಕರಾಗಿದ್ದು, ಸುಮಾರು 20 ವರ್ಷಗಳ ಹಿಂದೆ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಎರಡು ಮದುವೆಯಾಗಿದ್ದ ಅವರಿಗೆ ಮೊದಲ ಪತ್ನಿಯಿಂದ ಮಕ್ಕಳು ಇದ್ದರೂ, ಅವರು ನಾರಾಯಣ ಅವರಿಂದ ದೂರವಾಗಿದ್ದರು
ಅವರು ಸುಮಾರು 20 ವರ್ಷಗಳ ಹಿಂದಿನವರೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (ಆರ್ಎಸ್ಎಸ್) ಸಕ್ರಿಯರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹಳ್ಳಿಯ ಪಾಳುಬಿದ್ದ ಅಂಗಡಿಯೊಂದರ ವರಾಂಡಾದಲ್ಲಿ ಅನಾಥವಾಗಿ ಬಿದ್ದಿದ್ದಾಗ, ಸ್ಥಳೀಯ ವಾರ್ಡ್ ಸದಸ್ಯ ಶೆರಿಫ್ ಚಿನಾಲ್ ಅವರ ಮಾಹಿತಿ ಮೇರೆಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಸಮಾಜ ಸೇವಕಿ ಇರ್ಫಾನಾ ಇಕ್ಬಾಲ್ ಅವರು ನಾರಾಯಣನ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ನಾರಾಯಣ ಅವರ ಸಾವಿನ ಬಳಿಕ ಇರ್ಫಾನಾ ಇಕ್ಬಾಲ್ ಅವರೇ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬದವರು ಹಾಗೂ ಸಂಬಂಧಿಕರ ಸಹಕಾರ ಸಿಗದ ಸಂದರ್ಭದಲ್ಲಿ ಅವರು ಮುಂದೆ ಬಂದಿದ್ದು, ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಘಟನೆ ಕೇರಳದಲ್ಲಿ ಧಾರ್ಮಿಕ ಸೌಹಾರ್ದ ಹಾಗೂ ಮಾನವೀಯತೆಗೆ ಮತ್ತೊಂದು ಉದಾಹರಣೆಯಾಗಿದೆ



