ಭಾನುವಾರ, 25 ಅಕ್ಟೋಬರ್ 2026

4 ತಿಂಗಳ ಹಿಂದೆಯೇ ಮದುವೆಯಾಗಿದ್ದಳು ಹಂತಕಿ ಸಿಯಾ?

ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್, ತನ್ನ ಲವರ್‌ನನ್ನು ಮೊದಲೇ ಮದುವೆಯಾಗಿದ್ದಳು ಎಂಬ ವಿಚಾರ ಬಯಲಾಗಿದೆ.

Sponsored

ಮದುವೆ ಇಷ್ಟವಿಲ್ಲವೆಂದು ಲವರ್‌ ಜೊತೆಗೂಡಿ ಭಾವಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಿಯಾ ಗೋಯಲ್‌ ಕುರಿತಾದ ಒಂದೊಂದೇ ಶಾಕಿಂಗ್‌ ಮಾಹಿತಿಗಳು ಹೊರಬರುತ್ತಲೇ ಇವೆ. ಇವೆಲ್ಲವುಗಳ ನಡುವೆ, ಸಿಯಾ ಇದಾಗಲೇ ನಾಲ್ಕು ತಿಂಗಳ ಹಿಂದೆ ಲವರ್‌ ಚೇತನ್‌ ಜೊತೆ ಮದುವೆಯಾಗಿರುವುದಾಗಿ ಪೊಲೀಸರ ತನಿಖೆಯಿಂದ ಬಯಲಾಗಿದೆ! ಚೇತನ್‌ ಜೊತೆ ಮದ್ವೆಯಾಗಿದ್ದನ್ನು ಎಲ್ಲಿಯೂ ಹೇಳಿಕೊಳ್ಳದೇ ಇನ್ನೊಂದು ಮದ್ವೆಗೆ ಸಿದ್ಧಳಾಗಿ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಳು ಈ ಸಿಯಾ!!

Marriage AdMarriage AdSponsored