ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ‘ನನ್ನನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯಿರಿ’ (Rent Me for a Day) ಅನ್ನೋ ಪೋಸ್ಟ್ ಒಂದು ಹಾಕಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.
Sponsoredಹೌದು, ಯುವತಿಯೊಬ್ಬಳು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ತನ್ನ ಸಮಯವನ್ನು ನೀಡಲು ಸಿದ್ಧ, ಆದರೆ ಅದಕ್ಕೆ ಹಣ ಪಾವತಿಸಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಈ ಪೋಸ್ಟ್ ಈಗ ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
Marriage AdSponsoredಈ ಯುವತಿ ತನ್ನನ್ನು ಪ್ರೀತಿ-ಪ್ರೇಮಕ್ಕೆ ಸಂಬಂಧಿಸದ ಸಂಗಾತಿಯಾಗಿ ಬಾಡಿಗೆಗೆ ಪಡೆಯಬಹುದು ಎಂದು ಜಾಹೀರಾತು ನೀಡಿದ್ದಾಳೆ. ಕಾಫಿ ಕುಡಿಯುವುದು, ಸಿನಿಮಾ ನೋಡುವುದು, ಶಾಪಿಂಗ್ ಮಾಡುವುದು, ಕುಟುಂಬದ ಸಮಾರಂಭಗಳಿಗೆ ಹಾಜರಾಗುವುದು, ಪ್ರದರ್ಶನಗಳಿಗೆ ಭೇಟಿ ನೀಡುವುದು, ಹೊಸ ಸ್ಥಳಗಳನ್ನು ಸುತ್ತಾಡುವುದು ಅಥವಾ ಸುಮ್ಮನೆ ಮಾತನಾಡಲು ಒಬ್ಬರು ಬೇಕು ಎನ್ನುವವರು ತನ್ನನ್ನು ಸಂಪರ್ಕಿಸಬಹುದು ಎಂದಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗಿದ್ದು, ಹಲವರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳು ಮತ್ತು ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿನ ಒಂಟಿತನ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇಂತಹ ಸೇವೆಗಳು ಸಾಮಾನ್ಯವಾಗಬಹುದೇ ಎಂದು ಸಾವಿರಾರು ಮಂದಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಒಬ್ಬ ಬಳಕೆದಾರ ತಮಾಷೆಯಾಗಿ, “EMI ಸೌಲಭ್ಯ ಇದೆಯಾ?” ಎಂದು ಕಾಮೆಂಟ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.




