ಶನಿವಾರ, 24 ಅಕ್ಟೋಬರ್ 2026

ಇಡೀ ಕರಾವಳಿ ಭಾಗದ ಉಸ್ತುವಾರಿಯಾಗಿ ಯು ಟಿ ಖಾದರ್‌ ನೇಮಕ

ನೂತನ ಸಿಎಂ ಡಿಕೆ ಶಿವಕುಮಾರ್‌ ಸಂಪುಟದ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಪ್ರತಿಯೊಬ್ಬ ಸಚಿವರಿಗೆ ಎರಡರಿಂದ ಮೂರು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಸಂಪುಟ ವಿಸ್ತರಣೆ ಆದ ನಂತರ ಇದು ಬದಲಾವಣೆ ಆಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾಗಿರುವ ಮಂಗಳೂರು ಶಾಸಕ ಯು ಟಿ ಖಾದರ್‌ ಅವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ.

 ಜೊತೆಗೆ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಯು ಟಿ ಖಾದರ್‌ ಅವರನ್ನು ನೇಮಕ ಮಾಡಲಾಗಿದೆ.

ಯಾರಿಗೆ ಯಾವ ಜಿಲ್ಲೆ?
ಡಾ. ಜಿ. ಪರಮೇಶ್ವರ – ತುಮಕೂರು ಮತ್ತು ಚಿತ್ರದುರ್ಗ
ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ
ರಾಮಲಿಂಗರೆಡ್ಡಿ – ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
ಎಂ.ಬಿ. ಪಾಟೀಲ್ – ವಿಜಯಪುರ ಮತ್ತು ಬಾಗಲಕೋಟೆ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು ಮತ್ತು ದಾವಣಗೆರೆ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ ಮತ್ತು ಹಾಸನ
ಈಶ್ವರ ಖಂಡ್ರೆ – ಬೀದರ್ ಮತ್ತು ಗದಗ
ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ ಮತ್ತು ಹಾವೇರಿ
ಪ್ರಿಯಾಂಕ್ ಖರ್ಗೆ – ಕಲಬುರ್ಗಿ ಮತ್ತು ಯಾದಗಿರಿ
ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ – ರಾಯಚೂರು ಮತ್ತು ಕೊಪ್ಪಳ
ಯತೀಂದ್ರ ಸಿದ್ದರಾಮಯ್ಯ- ಮೈಸೂರು, ಚಾಮರಾಜನಗರ
ಬೈರತಿ ಸುರೇಶ್- ಕೋಲಾರ, ಚಿಕ್ಕಬಳ್ಳಾಪುರ
ಯು ಟಿ ಖಾದರ್- ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ