Sponsoredಮಂಗಳೂರು: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪಾದರಕ್ಷೆ ಕಳಚಿ ಪ್ರವೇಶಿಸುವಂತೆ ಸೂಚನಾ ಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಹಿರಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ ಜೈನ್ ಇದನ್ನು ಖಂಡಿಸಿ, ಗ್ರಾಮಸ್ಥರನ್ನು ಕೀಳಾಗಿ ಕಾಣುವ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಕೆಸರು ಮೆತ್ತಿದ ಚಪ್ಪಲಿಗಳಿಂದ ಕಚೇರಿ ಕೊಳೆಯಾಗುವುದನ್ನು ತಪ್ಪಿಸಲು ವಿನಂತಿಪೂರ್ವಕವಾಗಿ ಫಲಕ ಹಾಕಲಾಗಿದ್ದು, ಇದು ಕಡ್ಡಾಯವಲ್ಲ ಎಂದು ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಪಂ ಸಿಇಒ ಅವರನ್ನು ಸಂಪರ್ಕಿಸಿದಾಗ, ಪ್ರಕರಣವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ




