ಸೋಮವಾರ, 26 ಅಕ್ಟೋಬರ್ 2026
Trending

ಉಜಿರೆ ಎಸ್ ಡಿ ಎಂ ಕಾಲೇಜು: ಮ್ಯಾರಥಾನ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

ಉಜಿರೆ: ಸುಳ್ಯದ ಕೆ ವಿ.ಜಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

Sponsored

10 ಕಿ.ಮೀ ಓಟದಲ್ಲಿ ಮಿಥೇಶ್ ಸಿ.ಜಿ. ಚಿನ್ನದ ಪದಕ, ಆದಿತ್ಯ ಎನ್.ಪಿ. ಬೆಳ್ಳಿ ಪದಕ, 5ಕಿ.ಮೀ ಓಟದಲ್ಲಿ ನಿತಿನ್ ಯು.ಎಲ್. ಚಿನ್ನದ ಪದಕ, 3 ಕಿ.ಮೀ ಓಟದಲ್ಲಿ ಆಶ್ಲೇಶ್ ಚಿನ್ನದ ಪದಕ ಹಾಗೂ ಮಹೇಶ್ ಆರ್ ಬೆಳ್ಳಿ ಪದಕ, 21 ಕಿ.ಮೀ ಓಟದಲ್ಲಿ ಚಾಣಕ್ಯ ಕೇಶವ್ ಕಂಚಿನ ಪದಕ ಹಾಗು ಫಾರಂಗ್ 7ನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜ ಬಿ ತರಬೇತಿ ನೀಡಿರುತ್ತಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದಿ ಸಿದ್ದಾರೆ.

Advertisement